ಪೋಸ್ಟ್‌ಗಳು

YELLOW ALERT

ಬೆಳಗ್ಗೆನೇ "ಜವಾಬ್ದಾರಿ ತಗೊಂಡು ಕೆಲಸ ಮಾಡೋರ್ ಕಷ್ಟ ನಿಂಗೆ ಹೇಗೆ ತಾನೆ ಗೊತ್ತಾಗ್ ಬೇಕು ಹೇಳು" ಅಂತ ಬೈದಿದ್ದು ನಾಲಿಗೆ ಮೇಲೆ ಹಾಗೆ ಇತ್ತು. ತತ್ ಕ್ಷಣಕ್ಕೆ ಏನೂ ಅನಿಸದಿದ್ದರೂ ಅಳುತ್ತಲೆ ಆಫಿಸಿನ ದಾರಿ ಹಿಡಿದಿದ್ದೆ . ಮೀಟಿಂಗ್ ಮುಗಿದರೂ ಮೀಟಿಂಗ್ ಹಾಲಿನಲ್ಲೆ ಕೂತು ಯೋಚನೆಗಳ ಸಾಗರದಲ್ಲಿ ಮುಳುಗೇಳುತ್ತಿದ್ದೆ. ಮನೆಯವರನ್ನು ಎದುರು ಹಾಕಿಕೊಂಡು ನಾನು ಮತ್ತು ಕಿರಣ್  ಇಂಟರ್ಕಾಸ್ಟ್ ಮದುವೆ ಮಾಡಿಕೊಂಡಿದ್ದೆವು. ಆಗ ಅದೇ ಸಹ್ಯವೆನಿಸಿತ್ತು. ಅವನ ಸಾಂಗತ್ಯವೊಂದೆ ಸಾಕೆನಿಸಿತ್ತು. ಹೊಂಡ ಶೋರೂಮಿನಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ಕಾಲೇಜಲ್ಲಿ ನನ್ನ ಸೀನಿಯರ್ ಕೂಡ ಹೌದು. ಸರ್ಕಾರಿ ಕೆಲಸ ಎಂದು ನಮ್ಮ ಮನೆಯಲ್ಲಿ ಒಪ್ಪುತ್ತಾರೆ ಅಂತ ಅವನು. ಮುಂದೆ ಸ್ವಂತ ಶೋ ರೂಮ್ ಇಡೋ ಸಾಮರ್ಥ್ಯ ಇದೆ ಎಂದು ನಾನು. ಎರಡು ಮನೆಯವರು ಒಪ್ಪದಿದ್ದಾಗ ಕೆಲವು ಜನರ ಮುಂದಷ್ಟೆ ಮಂತ್ರ-ಮಂಗಲ್ಯದ ಪ್ರಕಾರ ಮದುವೆಯಾದೆವು. ಆಗೆಲ್ಲಾ ಕೆಲವು ಸ್ನೇಹಿತರು ಸರಳ ವಿವಾಹವಾದ ನಮ್ಮನ್ನು ಅಭಿನಂದಿಸಿದ್ದರು. ಹೋರಾಟದ ಹಾದಿ ಅಂತೆಲ್ಲಾ ಬಣ್ಣಿಸಿದ್ದರು. ಮದುವೆಯ ಹೊಸ ಬಿಸುಪಲ್ಲಿ ಎಲ್ಲವು ಚನಾಗೇ ಇತ್ತು. ಯಾವಾಗ ಕಿರಣ ಕೆಲಸ ತೊರೆದು ಮನೆಗೆ ಬಂದನೋ ಅವಗಿಂದ ಸಮಸ್ಯೆಗಳು ಒಂದೊಂದೆ ಶುರುವಾದವು. ಅದರ ಹಿಂದೆ ಕೋವಿಡ್ ಕೂಡ ಶುರುವಾಯಿತು. ಮನೆಯ ಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಉಳಿಸಿದ ದುಡ್ಡು ಪಾರ್ಟ್ನರ್ಶಿಪ್ಪಿನಲ್ಲಿ ಗೆಳೆಯನಿಗೆ ಕೊಟ್ಟು ಗೆಳೆಯ ಕೋವಿಡ್ ಸಮ...

Departures (2008)

ದೃಶ್ಯ 1 ಕಲ್ಲಿನ ಪತ್ರ   ಅವಳ ಕೈಹಿಡಿದು ಒಂದು ಬೆಣಚುಕಲ್ಲು ಕೊಡುತ್ತಾ... “ಪ್ರಾಚೀನ ಕಾಲದಲ್ಲಿ ಅಂದ್ರೆ ಸಂವಹನ ಅಷ್ಟು ಪಕ್ವವಾಗದ ಸಮಯದಲ್ಲಿ ಜನರು ತಮ್ಮ ಭಾವನೆಗಳನ್ನು ಪ್ರೀತಿ ಪಾತ್ರರಿಗೆ ಹೇಳಲು ನದಿ ದಡದಲ್ಲಿ ದೊರೆಯುವ ಬೆಣಚುಗಲ್ಲುಗಳನ್ನು   ಬೇರೆಯವರಿಗೆ ಕೊಡುತ್ತಿದ್ದರು” ಅವನು ಕೊಬಯಾಶಿ.   ಹೆಂಡತಿ ಮಿಕಾ ಪ್ರಶ್ನಾರ್ಥಕವಾಗಿ ಅವನೆಡೆ ನೋಡುತ್ತಾಳೆ.   “ಅಂದ್ರೆ ಕಲ್ಲಿನ ಮೇಲ್ಪದರದ ಆಧಾರದ ಮೇಲೆ ಒಬ್ಬರ ಮನಸು ಅರ್ಥ ಆಗ್ತಾ ಇತ್ತು. ನುಣುಪು ಬೆಣಚುಕಲ್ಲುಗಳು ಶಾಂತ ಮನಃಸ್ಥಿತಿಯ ಪ್ರತೀಕ. ಒರಟಾಗಿದ್ದರೆ ಮತ್ತೊಬ್ಬರೆಡೆಗಿನ ಅವರ ಕಾಳಜಿಯನ್ನ ಹೇಳ್ತಾ ಇತ್ತು.”   ಕಲ್ಲು ಕೈಲಿಡಿದು ಎದೆಗವುಚಿ ಅವಳು ನಿಲ್ಲುತ್ತಾಳೆ.... ಮೌನ....   “ THANK YOU” ಮಿಕಾ ಹೇಳುತ್ತಾಳೆ. “ನಿಂಗೆ ಏನ್ ಅನಿಸ್ತಾ ಇದೆ ನಾ ಕೊಟ್ಟ ಕಲ್ಲಿನ ಬಗ್ಗೆ”   “ಅದು ಸಿಕ್ರೆಟ್” ಅವಳು ನಗುತ್ತಾಳೆ.”ತುಂಬಾ ಒಳ್ಳೆ ಕಥೆ. ಯಾರು ಪರಿಚಯ ಮಾಡಿ ಕೊಟ್ಟದ್ದು ನಿನಗೆ”   “ಅದೇ ಹಳೆ ಮುದುಕ” ಅವನು ಮೌನಕ್ಕೆ ಜಾರುತ್ತಾನೆ.          “ಅಂದ್ರೆ ಆ ನಿನ್ನ ಬಳಿ ಇರೋ ದೊಡ್ಡ ಒರಟು ಕಲ್ಲು.....?”   “ ಹೌದು. ನಮ್ಮ ಅಪ್ಪ ಕೊಟ್ಟಿದ್ದು. ಪ್ರತೀ ವರ್ಷ ಇಬ್ಬರೂ ಒಬ್ಬರಿಗೊಬ್ಬರು ಕಲ್ಲಿನ ಪತ್ರ ಕೊಡಬೇಕು ಅಂತ ಮಾತಾಡಿ ನನ್ನ ಬಿಟ...

ಪ್ರೈವೆಸಿ

ಮೇ ತಿಂಗಳು.ನನ್ನ ಬರ್ತಡೆ ಮಂತು. ಪ್ರತಿ ಸಲದಂತೆ ಜನುಮದಿನದ ಹತ್ತಿರ ಹತ್ತಿರ ರಕ್ತದಾನ ಮಾಡೋದು ನಾ ರೂಢಿಸಿಕೊಂಡು ಬಂದ ಅಭ್ಯಾಸ. ಅದರ ಬಗ್ಗೆ ನಂಗೆ ಒಂದು ತೆರನಾದ ಹೆಮ್ಮೆ ಕೂಡ ಇತ್ತು. ಅದನ್ನ ಸ್ವಲ್ಪ ಜನರ ಬಳಿ ಹೇಳಿಕೊಳ್ಳುತ್ತಾ ಇರ್ತಿನಿ. ನಾನೂ ಸಹ ಹಲವು ವರ್ಷಗಳ ಹಿಂದೆ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮಾಡಿದ್ದ ಪೋಸ್ಟ್ ನೋಡಿ, ನನ್ನ ಬರ್ತ್ ಡೆ ದಿನ ಕೂಡ ಹೀಗೆ ಮಾಡಬಹುದಲ್ಲ ಅನಿಸಿ ಅದನ್ನ ಫಾಲೋ ಮಾಡೋಕೆ ಶುರು ಮಾಡಿದ್ದೆ. ರಕ್ತದಾನ ಮಾಡೋದು ಒಳ್ಳೆಯದೆ. ಎಷ್ಟು ಸಲ ಮಾಡಿದ್ದೇನೆ ಅಂತ ಲೆಕ್ಕ ಇರಲಿ ಅಂತ ಪ್ರಮಾಣಪತ್ರ (ಸರ್ಟಿಫಿಕೇಟ್) ಮರೆಯದೇ ಪಡೆದು ತರುತ್ತಾ ಇರ್ತಿನಿ. ರಕ್ತ ಪಡೆದವರ ಸಂಬಂಧಿಕರು ಇದ್ದರೆ, ಅವರು ನನಗೆ ಥ್ಯಾಂಕ್ಸ್ ಹೇಳೋದು ಪ್ರತಿಯಾಗಿ ನಾ ಅವರಿಗೆ ಒಂದಷ್ಟು ಸಮಧಾನದ ಮಾತು ಹೇಳೋದು ಕೂಡ ನಡೆಯುತ್ತದೆ. ಒಂದೆರಡು ವರ್ಷದ ಹಿಂದೆ ಇದರಿಂದಾಗಿ ನನ್ನಲ್ಲಿ ಮೂಡಿದ ತುಸು ಅಹಂಕಾರದ ನೀರಿನ ಗುಳ್ಳೇ ಪಟ್ಟನೆ ಒಡೆದುಹೋಗೋ ಪ್ರಸಂಗವೊಂದು ನಡೆಯಿತು. ಅದರಿಂದ ನಾ ಕಲಿತದ್ದು ಜಾಸ್ತಿ.    ಮೇ ಕೊನೆಯ ವಾರ ರಕ್ತದಾನ ಮಾಡ್ಬೇಕು ಅಂತ ಡಿಸೈಡ್ ಮಾಡ್ಕೊಂಡಿದ್ದೆ. ಕೆಲಸ ಮಾಡುವಾಗ ನಾನು ಮೆಂಬರ್ ಆಗಿದ್ದ ವಾಟ್ಸಪ್ಪು ಗ್ರೂಪಿನಲ್ಲಿ. ತುಮಕೂರು ಜನರಲ್ ಹಾಸ್ಪಿಟಲ್‌ನಲ್ಲಿ ಯಾರೋ ಪೇಶಂಟಿಗೆ ಓ ಪಾಸಿಟಿವ್ ರಕ್ತದ ತುರ್ತು ಅವಶ್ಯಕತೆ ಇದೆ ಎಂದು ಮೆಸೇಜು ಬಂದು ಗುದ್ದಿತು. ಕಾಂಟ್ಯಕ್ಟ್ ನಂಬರಿಗೆ ಕ...

ಲಿಮಿಟೆಡ್ ಎಡಿಷನ್

ಏನೋ ಮರೆತವಳಂತೆ ಅನಿಸಿ ಮತ್ತದೆ ನಂಬರಿಗೆ ಕರೆ ಮಾಡಿದೆ . ‘ ಏನಮ್ಮ ವಾಗ್ಮಿತಾ ಮತ್ತೇನಾದರೂ ಹೇಳೋದು ಬಾಕಿ ಇತ್ತ ’  ಆ ಕಡೆಯಿಂದ ಧ್ವನಿ ಉಸುರಿತು . ’ ಅಲ್ಲ ಅದು .  ಅಕ್ಚುಲಿ .  ಇದನ್ನ ಅಮ್ಮನ ಹತ್ರ ಡಿಸ್ಕಸ್ ಮಾಡ್ಬೇಡಿ ತುಂಬಾ ಹೆದರಿಕೊಳ್ತಾಳೆ .  ಗೊತ್ತಲ್ವಾ ..... ’  ಇವರನ್ನ ಏನಂತ ಕರೀಬೇಕು   ಅನ್ನೋದು ಮೊದಲಿನಿಂದಲೂ ಗೊಂದಲ .  ಹೇಗೊ ಮ್ಯಾನೇಜು ಮಾಡಿಕೊಂಡು ಮಾತಾಡೋಕೆ ಪ್ರಯತ್ನಿಸಿದ್ದೆ . ’ ನನಗೆ ಅರ್ಥ ಆಗತ್ತೆ .  ನೀನೆ ಹೇಳೋವರೆಗೂ ನಾನು ಮಾತಾಡೊಲ್ಲ .  ಆದರೆ ನಿನಗೆ ತೊಂದರೆ ಎನಿಸೊ ಸಣ್ಣ ವಿಷಯ ಆದರೂ ನನ್ನ ಬಳಿ ಹೇಳಿಕೊಳ್ಳೋದು ಮರಿಬೇಡ ’  ಅವರು ಹೇಳಿ ನನ್ನ ಪ್ರತಿಕ್ರಿಯೆಗೆ ಕಾಯುತ್ತಿದ್ದರು . ಸರಿಯೆಂದು ಫೋನಿಟ್ಟೆ . ಇವರು ಪ್ರಸಾದ್ .  ಅಮೃತೂರಿನಲ್ಲಿ ಇನ್ಸ್ಪೆಕ್ಟರ್ ಆಗಿದ್ದಾರೆ .  ಇವರನ್ನ ನಿಮಗೆಲ್ಲಾ ಏನಂತ ಪರಿಚಯ ಮಾಡಿಕೊಡಬೇಕು ಗೊತ್ತಾಗ್ತಿಲ್ಲ .  ನನ್ನ   Ex- ಭಾವಿ ಅಪ್ಪ ಅಂತನೊ ಆತಂಕದ ಕಟ್ಟೆಯೊಡೆಯುವಾಗ ದೊರಕಿದ ಸಣ್ಣ ಗರಿಕೆಯೋ ಗೊತ್ತಿಲ್ಲ. *** ಮೂರ್ನಾಲ್ಕು ವರ್ಷಗಳ ಕೆಳಗೆ ಒಂದು ಘಟನೆಯಾಯ್ತು .  ಅಂದು ನಾನೆಷ್ಟು ತಪ್ಪು ಮಾಡಿದೆ ಅಂತ ಅವತ್ತಿನ ಬಿಸಿಯಲ್ಲಿ ನ ನ್ನ ಅರಿವಿಗೆ ಬಂದಿರಲಿಲ್ಲ.   ಅಪ್ಪ ಹೋಗಿ ಎರಡು ವರ್ಷವಾಗಿತ್ತು .  ಒಂದು ದಿನ ಅಮ್ಮ ನನ್ನ ಕೈ ಯಿಡಿದು  ಪ್ರಸಾದ್ ಅವರನ್ನ ತಾನು ...

ಕಿವುಡು ಕಾಂಚಾಣ

  ಲಭ್ಯವಿದ್ದ ಮಾಹಿತಿಗಳು ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪೂರಕವಾಗಿರಲಿಲ್ಲ. ನಿರ್ಧಾರದ ನಿರೀಕ್ಷೆಯಲ್ಲಿದ್ದವರು ಪದೇ ಪದೇ ಕರೆಮಾಡುತ್ತಿದ್ದರು. ವರ್ಷಗಳ ಕೆಳಗೆ ಕೆಲಸಕ್ಕೆ ಸೇರುವಾಗ Decision Making ಬಗ್ಗೆ ಪುಂಖಾನುಪುಂಖವಾಗಿ ಇಂಟರ್ವ್ಯೂನಲ್ಲಿ ಕೊಚ್ಚಿಕೊಂಡಿದ್ದು ಪೇಲವವೆನಿಸಿತು. ಈ ಇಳಿಸಂಜೆಯಲ್ಲಿ ಬಿಸಿಲುಕೋಲು ಕೀಬೋರ್ಡು ಹಾಗು ಅದಕ್ಕಂಟಿದ  ಕೈಗಳ ಮೇಲೂ ಹಾದುಹೋಗಬಾರದೇಕೆ ಎಂದುಕೊಳ್ಳುತ್ತಿದ್ದೆ. ಮೂರ್ನಾಲ್ಕು ಸಾರಿ ಗ್ರಾಮರ್ರು ನೋಡಿ ಒಂದು ಮೇಲು ಕಳುಹಿಸಿ ಹೊರಡಲು ಸಿದ್ಧನಾದೆ. ನಾ ಬರೆದದ್ದು ಓದುವರರ ತೆಕ್ಕೆಗೆ ಹಾಕುವವರೆಗೂ ನಾನು ಚಿಂತಿತ. ಆಮೇಲೆ ಸರಾಗ. ಬರೆದದ್ದನ್ನ ಜೊತೇಲಿ ಕಾಪಿಟ್ಟುಕೊಳ್ಳೋದಾದರೂ ಎಂತಕ್ಕೆ, ಹಾಗೆ ಅತೀ  ಪೇರೆಂಟಿಂಗು ಮೂಡೋದು ಕೂಡ ಈ ಕಾಲದಲ್ಲಿ ಒಳ್ಳೆದಲ್ಲ ಅಲ್ವ.      ಬರೆಯೋದರ ಬಗ್ಗೆ ಹೇಳ್ಬೇಕು. ಮೊದಲು ಏನಾದರೂ ಬರೆದರೆ ಹಂಚಿಕೊಳ್ಳುವಷ್ಟು ಧೈರ್ಯವಂತೂ ಇರಲಿಲ್ಲ . " ಇಷ್ಟು ಬಾಲಿಶವಾಗಿದ್ಯಲ್ಲ ಗುರು" ಅನಿಸಿ ಡಿಲೀಟು ಮಾಡಿ ಬಿಸಾಕಿದ್ದಿದೆ . ಹೇಗೋ ತೆವಳುತ್ತಾ ಸಾಗುತ್ತಾ ಇಲ್ಲಿಯವರೆಗೂ ಬಂದಿದ್ದೇನೆ . ಆಗಾಗ್ಗೆ  ಏನಾದರೂ ಬರೀಬೇಕು ಅಂತ ಅಂದು ಕೊಳ್ತಾ ಇರ್ತಿನಿ. ಅವತ್ತು ಸಂಜೆ  ನಾಲ್ಕು ಮುಕ್ಕಾಲು ಗಂಟೆಗೆ ಬ್ರಾಂಚಿನ ಗ್ರಿಲ್ ಗೇಟು ಬಡಿಯುತ್ತಾ ಮಗನಿಗೆ ಆಸ್ಪತ್ರೆಗೆ ದುಡ್ಡು ಬೇಕು ದಯವಿಟ್ಟು  ಕೊಡಿ ಎಂದು ಯಾವಾಗಲೋ ತಣ್ಣಗಾ...