ಲಿಮಿಟೆಡ್ ಎಡಿಷನ್

ಏನೋ ಮರೆತವಳಂತೆ ಅನಿಸಿ ಮತ್ತದೆ ನಂಬರಿಗೆ ಕರೆ ಮಾಡಿದೆ.

ಏನಮ್ಮ ವಾಗ್ಮಿತಾ ಮತ್ತೇನಾದರೂ ಹೇಳೋದು ಬಾಕಿ ಇತ್ತ’ ಆ ಕಡೆಯಿಂದ ಧ್ವನಿ ಉಸುರಿತು.

ಅಲ್ಲ ಅದುಅಕ್ಚುಲಿಇದನ್ನ ಅಮ್ಮನ ಹತ್ರ ಡಿಸ್ಕಸ್ ಮಾಡ್ಬೇಡಿ ತುಂಬಾ ಹೆದರಿಕೊಳ್ತಾಳೆಗೊತ್ತಲ್ವಾ.....’ ಇವರನ್ನ ಏನಂತ ಕರೀಬೇಕು  ಅನ್ನೋದು ಮೊದಲಿನಿಂದಲೂ ಗೊಂದಲಹೇಗೊ ಮ್ಯಾನೇಜು ಮಾಡಿಕೊಂಡು ಮಾತಾಡೋಕೆ ಪ್ರಯತ್ನಿಸಿದ್ದೆ.

ನನಗೆ ಅರ್ಥ ಆಗತ್ತೆನೀನೆ ಹೇಳೋವರೆಗೂ ನಾನು ಮಾತಾಡೊಲ್ಲಆದರೆ ನಿನಗೆ ತೊಂದರೆ ಎನಿಸೊ ಸಣ್ಣ ವಿಷಯ ಆದರೂ ನನ್ನ ಬಳಿ ಹೇಳಿಕೊಳ್ಳೋದು ಮರಿಬೇಡ’ ಅವರು ಹೇಳಿ ನನ್ನ ಪ್ರತಿಕ್ರಿಯೆಗೆ ಕಾಯುತ್ತಿದ್ದರು.ಸರಿಯೆಂದು ಫೋನಿಟ್ಟೆ.

ಇವರು ಪ್ರಸಾದ್. ಅಮೃತೂರಿನಲ್ಲಿ ಇನ್ಸ್ಪೆಕ್ಟರ್ ಆಗಿದ್ದಾರೆಇವರನ್ನ ನಿಮಗೆಲ್ಲಾ ಏನಂತ ಪರಿಚಯ ಮಾಡಿಕೊಡಬೇಕು ಗೊತ್ತಾಗ್ತಿಲ್ಲನನ್ನ Ex-ಭಾವಿ ಅಪ್ಪ ಅಂತನೊ ಆತಂಕದ ಕಟ್ಟೆಯೊಡೆಯುವಾಗ ದೊರಕಿದ ಸಣ್ಣ ಗರಿಕೆಯೋ ಗೊತ್ತಿಲ್ಲ.


***

ಮೂರ್ನಾಲ್ಕು ವರ್ಷಗಳ ಕೆಳಗೆ ಒಂದು ಘಟನೆಯಾಯ್ತುಅಂದು ನಾನೆಷ್ಟು ತಪ್ಪು ಮಾಡಿದೆ ಅಂತ ಅವತ್ತಿನ ಬಿಸಿಯಲ್ಲಿ ನನ್ನ ಅರಿವಿಗೆ ಬಂದಿರಲಿಲ್ಲ. 

ಅಪ್ಪ ಹೋಗಿ ಎರಡು ವರ್ಷವಾಗಿತ್ತುಒಂದು ದಿನ ಅಮ್ಮ ನನ್ನ ಕೈಯಿಡಿದು ಪ್ರಸಾದ್ ಅವರನ್ನ ತಾನು ಮದುವೆಯಾಗುವುದರ ಬಗ್ಗೆ ಮಾತಾಡಬೇಕೆಂದು ಮಾತು ಶುರುಮಾಡುತ್ತಿದ್ದಳುನಾ ತಡೆದು ನೀನು ನನ್ನನ್ನ ಕೇಳ್ತಾ ಇದ್ದೀಯಾ ಅಥವಾ ಹೇಳ್ತಾ ಇದ್ದೀಯಾ..??ಎಂದು ಸಿಟ್ಟಿನಿಂದ ಅಂದೆಅಮ್ಮ ತಬ್ಬಿಬ್ಬುಗೊಂಡಳುನನಗೆ ಅವಳ ಬಗ್ಗೆ ಅಸಹ್ಯವೆನಿಸಿತ್ತುನನಗೆ ಇನ್ನೊಬ್ಬ ಅಪ್ಪ ಬೇಡನಿಂಗೆ ಇನ್ನೊಬ್ಬ ಗಂಡ ಬೇಕಾದರೆ ಕಟ್ಕೊ’ ನನ್ನ ಗಂಟಲು ಉಬ್ಬಿ ಅಳು ಒತ್ತರಿಸಿ ಬಂತುಅಪ್ಪನನ್ನು ನಾನು ತುಂಬಾ ಮಿಸ್ ಮಾಡಿಕೊಂಡಿದ್ದೆಅವನ ಸ್ಥಾನದಲ್ಲಿ ಮತ್ತೊಬ್ಬರನ್ನ ಊಹಿಸಿಕೊಳ್ಳುವುದು ಸಾಧ್ಯವಿರಲಿಲ್ಲದಡದಡನೆ ಅಪ್ಪನ ಫೋಟೋ ಬಳಿ ಹೋಗಿ ಅವುಚಿ ಅಳುತ್ತಾ ನಿಂತೆಇದು ಅವಳನ್ನು ಘಾಸಿಗೊಳಿಸಿತ್ತುಇನ್ನೆಂದೂ ಅವಳು ಈ ವಿಚಾರದ ಬಗ್ಗೆ ಮಾತಾಡಿರಲಿಲ್ಲ. ಗಾಗ್ಗೆ ಬರುತ್ತಿದ್ದ ಪ್ರಸಾದ್ ತೀರಾ ಅಪರೂಪವಾದರೂ ಅಮ್ಮ ಮಾತಾಡುತ್ತ ಇರುತ್ತಿದ್ದಳುಅದು ನನ್ನನೆಂದೂ ವಿಚಲಿತಗೊಳಿಸಿರಲಿಲ್ಲ

ಇತ್ತೀಚೆಗೆ ಹೊರಜಗತ್ತಿಗೆ ತೆರೆದುಕೊಳ್ಳುತ್ತಾ ಇರುವಾಗ ಅಂದು ನಾನೆಷ್ಟು ತಪ್ಪು ಮಾಡಿದೆ ಎಂದು ಅನಿಸುತ್ತಿರುತ್ತದೆಅಮ್ಮನ ಹತ್ತಿರ ಇದೆಲ್ಲಾ ಮಾತಾಡಬೇಕು. ಸಾರಿ ಕೇಳಿ ಅವಳ ಸೀರೆ ನೆರಿಗೆ ಮರೆಯಲ್ಲಿ ಅಳಬೇಕು ಎಂದು ಅಂದುಕೊಳ್ತಾ ಇರ್ತಿನಿ. ಹಿಂಜರಿಕೆಯಿಂದಲೋ ಪಶ್ಚಾತಾಪದಿಂದಲೋ ಅದಿನ್ನೂ ಕಾರ್ಯ ರೂಪಕ್ಕೆ ಬಂದಿರಲಿಲ್ಲ.  ಅಮ್ಮನ ಬಳಿ ಮಾತಾಡುವುದು ತುಂಬಾ ಇದೆಈಗೇನಾದರೂ ಸರಿಮಾಡುವುದಕ್ಕೆ ಅವಕಾಶವಿದೆಯಾ ಅಂತ ಯೋಚಿಸುತ್ತಾ ಇರ್ತಿನಿಇಂತ ಸಮಯದಲ್ಲಿ ಪ್ರಸಾದ್ ಅವರಿಗೆ ಕರೆಮಾಡಿ ಅಮ್ಮನಿಗೆ ಹೇಳಬೇಡಿರೆಂದು ಕೇಳಿಕೊಳ್ಳೋದಕ್ಕೂ ಕಾರಣವಿತ್ತುಹೊಸ ಪ್ರಾಜೆಕ್ಟಿನ ಪರಿಣಾಮ ಆಫೀಸಿನಿಂದ ಅಮೃತೂರಿಗೆ ನನ್ನನ್ನು ವರ್ಗಾವಣೆ ಮಾಡಿದ್ದರುಫ್ಲಾಟ್ ನಲ್ಲಿ ಇರೋದು ನನಗೆ ಮೊದಲಿನಿಂದಲೂ ಇಷ್ಟ ವಿಲ್ಲಇಲ್ಲೊಂದು ಇಂಡಿಪೆಂಡೆಂಟ್ ಹೌಸ್ ಬಾಡಿಗೆಗೆ ಸಿಕ್ಕಿತ್ತು. 'ಮೊದಲು ಕೂಡ ಇಲ್ಲಿ ಒಬ್ಬ ಹುಡುಗಿ ಇದ್ದಳು ಶುಭಾ  ಅಂತ.' ಪಕ್ಕದ ಮನೆಯವರು ಹೇಳ್ತಾ ಇರ್ತಾರೆಮೂಡಿಯಂತೆ. ಅನಾಥೆ. ’ಅಪ್ಪ ಅಮ್ಮ ಖಾಯಿಲೆಯಿಂದ ತೀರಿಹೋದರು. ಉಳಿಸಿಕೊಳ್ಳಲು ಮಾಡಿದ ಕೈಸಾಲ ತೀರಿಸಲಾಗದೇ ಮನೆ ಮಾರಿ ಹೋದಳಂತೆ. ತಂದೆ ತಾಯಿಗಳು ಪ್ರೀತಿಯಿಂದ ಕಟ್ಟಿಸಿದ್ದ ಮನೆ. ಯಾವ ಸಂಬಂಧಿಗಳೂ ಸಹಾಯಕ್ಕೆ ಬರಲಿಲ್ಲ. ಅದಾದ ಮೇಲೆ ಮತ್ತೂ ಮೌನಿಯಾಗಿದ್ದಳು. ಮುಖ ಕೊಟ್ಟು ಎಂದೂ ಮಾತಾಡಿದವಳಲ್ಲವಂತೆ. ಅವಳು ಮನೆ ಖಾಲಿಮಾಡಿ ಆರೇಳು ತಿಂಗಳಾಗಿದೆ ಮುದ್ದು ಬೆಕ್ಕೊಂದನ್ನು ಇಲ್ಲೇ ಬಿಟ್ಟು ಹೋಗಿದ್ದಾಳೆ. ಅದು ತುಂಬಾ ಕ್ಯೂಟ್ ಆಗಿದೆ ಕೂಡ

 ಮನೆ ವಿಚಾರಕ್ಕೆ ಬರೋಣ ಇದು ಸ್ವಲ್ಪ ವಿಶಾಲವಾಗಿದೆಬೆಂಗಳೂರಿನಲ್ಲಿ ಸ್ವಂತ ಮನೆಯಿಂದ ಓಡಾಡ್ತಾ ಇದ್ದುದರಿಂದ ಆಫಿಸಿಂದ ಕೊಡಮಾಡುತ್ತಿದ್ದ ಫರ್ನಿಚರ್ ಅನ್ನು ಕ್ಲೈಮ್ ಮಾಡಿರಲಿಲ್ಲಇಲ್ಲಿ ಬಂದು ಮನೆಗೆ ಅಗತ್ಯವಾದ ಎಲ್ಲಾ ಸಾಮಾನುಗಳನ್ನು ಕೊಂಡು ಪೇರಿಸಿ ಇಟ್ಟುಕೊಂಡಿದ್ದಿನಿ. ಆಫೀಸು ಕೊಲೀಗು ತಾತ್ಕಾಲಿಕನ ಜೊತೆ ಬ್ರೆಕ್ ಅಪ್ ಆದ್ಮೇಲೆ ಬೆಂಗಳೂರಿಂದ ನನಗೆ ಹೊರಗೆ ಬಂದರೆ ಸಾಕಿತ್ತು. ಅಮ್ಮನಿಗೆ ಅಕ್ಕ ಪಕ್ಕ ಪರಿಚಯದವರು ಇದ್ದುದರಿಂದಲೂ ಬ್ಯಾಂಕಿನಲ್ಲಿ ಕ್ಯಾಷಿಯರ್ ಆಗಿ ದುಡಿಯುತ್ತಿದುದರಿಂದಲೂ ನನ್ನ ಜೊತೆ ಬರುವುದು ಕಾರ್ಯಸಾಧುವಾಗಿರಲಿಲ್ಲ."ಯಡಿಯೂರು ಸಿದ್ಧಲಿಂಗೇಶ್ವರ ನಗರ ಸಾರಿಗೆ" ಬಸ್ಸುಗಳು ಮನೆಯ ಅಣತಿ ದೂರದಲ್ಲಿ ನಿಲ್ಲುತ್ತಿದ್ದವು. ಹತ್ತಿದರೆ 15 ನಿಮಿಷದಲ್ಲಿ ಆಫೀಸು ಸೇರಿರುತ್ತಿದ್ದೆ‌. ಮುಂದಿನಬೀದಿಯಲ್ಲಿ ಸೂಪರ್ ಮಾರ್ಕೇಟ್ ಕೂಡ ಇತ್ತು. ಬದುಕೋಕೆ ಸಾಕಾಗುವಷ್ಟು ಅಡುಗೆಯಂತೂ ಕಲಿತಿದ್ದೆ. ಸುಸೂತ್ರವಾಗಿ ಜೀವನ ನಡೆಯೋಕೆ ಎಲ್ಲಾ ವ್ಯವಸ್ಥೆಯೂ ಅಲ್ಲಿದ್ದವು.


ಮನೆಗೆ ಬಂದಮೇಲೆ ಒಂದು ತಲೆನೋವು ಶುರುವಾಗಿತ್ತುಶುಭಾಳ ಹೆಸರಿಗೆ ಅಗಾಗ್ಗೆ ಕೆಲವು ಪತ್ರಗಳು ಬರತೊಡಗಿದ್ದವುಅವುಗಳನ್ನೆಂದೂ ನಾನು ತೆರೆದುನೋಡುವ ಗೋಜಿಗೆ ಹೋಗಿರಲಿಲ್ಲಆದರೆ ಅದೊಂದು ದಿನ ಬ್ಯಾಂಕಿನಿಂದ ನೋಟೀಸು ಕೂಡ ಬಂದಿತ್ತುತೆರೆದು ನೋಡಿದಾಗ ಅದರಲ್ಲಿ ಒಡವೆ ಹರಾಜಿಗೆ ಕೊನೆಯ ನೋಟೀಸು ಎಂದಿತ್ತುಹೇಗಾದರೂ ಮಾಡಿ ಅವರಿಗೆ ಇದನ್ನ ತಿಳಿಸುವುದು ಜರೂರತ್ತು ಅನಿಸಿತುಪಕ್ಕದವರು ವಿಚಾರಿಸಿದರೂ ಅವರು ಎಲ್ಲಿದ್ದಾರೆಂದು ಗೊತ್ತಿರಲಿಲ್ಲ ಆದರೆ ತುಮಕೂರಿನ ಟಿ.ಎಸ್.ಹೆಚ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವುದು ತಿಳಿಯಿತುಗೂಗಲ್ಲು ಹುಡುಕಿ ಅಸ್ಪತ್ರೆಗೆ ಕರೆಮಾಡಿ ಶುಭ ಅವರಿಗೆ ಕೊಡಿರೆಂದು ಕೇಳಿದೆಎರಡು ನಿಮಿಷದ ನಂತರ ಶುಭಾ ಫೋನೆತ್ತಿಕೊಂಡರು.

ಹಲೋ...’ ಎಲ್ಲೋ ಓಡುವ ಧಾವಂತ ಅವರ ಧ್ವನಿಯಲ್ಲಿತ್ತು.

ನಾ ನಡೆದಿದ್ದೆನ್ನು ಹೇಳಿ ಕಳುಹಿಸಲು ವಿಳಾಸ ಕೇಳಿದೆ.

ನಾನು ಯಾವ ಗೋಲ್ಡ್ ಲೋನು ತಗೊಂಡಿಲ್ಲನಿನಗ್ಯಾವಳು ಹೇಳಿದ್ದು ಆಸ್ಪತ್ರೆಗೆ ಕರೆಮಾಡು ಅಂತ

ನನಗೆ ಕಕಮಕವಾಯಿತುಇಷ್ಟು ಒರಟು ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ.

ಇಲ್ನೋಡಿ ಹೀಗೆಲ್ಲಾ ಮಾತಾಡೊದು ಸರಿಯಲ್ಲನಿಮ್ಮ ಹೆಸರಿಗೆ ಬಂದಿದ್ದರಿಂದ ನಾ ಕೇಳಿದೆನಿಮಗೆ ತೊಂದರೆಯಾಗಬಹುದು ಅನ್ನೋ ಕಾರಣಕ್ಕೆ ಕರೆ ಮಾಡಿರೋದು’ ನಾನು ತಡಬಡಾಯಿಸಿ ಹೇಳೋಕೆ ಪ್ರಯತ್ನಿಸಿದೆ

ಬೇಕಾಗಿಲ್ಲಅದು ಸಹಿ ಹಾಕಿಸಿ ನಮ್ಮ ದೊಡ್ಡಪ್ಪನ ಮಗ ತಗೊಂಡಿದ್ದ ಅವನಿಗೆ ಬೇಕಾದರೆ ತಗೋತಾನೆಮತ್ತೆ ಆಸ್ಪತ್ರೆಗೆ ಕರೆಮಾಡಿದರೆ ಸರಿಯಾಗಲ್ಲಇಡೆ ಫೋನು’ ದೊಪ್ಪನೆ ಫೋನಿಟ್ಟ ಸದ್ದಾಯಿತು.


ಹೆಂಗೆ ಮಾತಾಡ್ತಾಳೆ ಬೇವರ್ಸಿ ಅನಿಸಿತು. ಪರಿಚಯದವರಿಗೆ ಏಕವಚನದಲ್ಲಿ ಮಾತಾಡಿಸೋಕೆ ಹಿಂದೆ ಮುಂದೆ ನೋಡುವ ನಾನು ಇದ್ಯಾರೋ ಗೊತ್ತು ಗುರಿ ಇಲ್ಲದವಳಿಂದ ಅನ್ನಿಸಿಕೊಂಡಿದ್ದು ವಿಚಲಿತಗೊಳಿಸಿತ್ತು.  ಎದುರಿಗೆ ಸಿಕ್ಕರೆ ಇನ್ನೂ ಜಾಡಿಸಬೇಕೆಂದು ಮನಸಿನಲ್ಲೇ ಅಂದುಕೊಂಡೆಏನಾದರೂ ಆಗಲಿ ಮತ್ತೆ ಕರೆಮಾಡಬಾರೆಂದು ನಿರ್ಧರಿಸಿದೆಆಗಾಗ್ಗೆ ಪತ್ರಗಳು ಬರುವುದು ನಿಲ್ಲಲಿಲ್ಲನನಗೆ ಮತ್ತೆ ಫೋನು ಮಾಡಿ ಬಯ್ಯಿಸಿಕೊಳ್ಳುವ ಮನಸಂತೂ ಆಗಲಿಲ್ಲ.

ಒಂದು ದಿನ ವಿಚಿತ್ರವಾದ ಘಟನೆ ನಡೆಯಿತುಸ್ನಾನ ಮಾಡಿ ಹೊರಬಂದಾಗ ಟೇಬಲ್ ಮೇಲಿಟ್ಟಿದ್ದ  ಒನ್ ಪ್ಲಸ್ ಲಿಮಿಟೆಡ್ಎಡಿಷನ್ ಫೋನನ್ನು ಬೆಕ್ಕು ಕೆಳಕ್ಕೆ ಬೀಳಿಸಿ ಮೊಬೈಲು ಪರದೆಯನ್ನು ಕೆರೆದು ಹಾಕಿತ್ತುನನಗೆ ತುಸು ಸಿಟ್ಟು ಬಂದರೂ, ಮೊಬೈಲು ಬದಲಾಯಿಸಲು ನಾನು ತುಂಬಾ ದಿನದಿಂದ ಅಂದುಕೊಳ್ತಾ ಇದ್ದೆಹಾಗಾಗಿ ಅದನ್ನು ಅಲ್ಲೆ ಬಿಸುಟು ಆಫಿಸಿಗೆ ಹೋಗಿದ್ದೆಸಂಜೆ ವಾಪಸ್ಸು ಬಂದಾಗ ಬಾಗಿಲಲ್ಲಿ ಒಂದು ಪಾರ್ಸಲ್ಲು ಬಾಕ್ಸ್ ಇರುವುದು ಕಂಡಿತುಕೂಲಂಕುಷವಾಗಿ ಗಮನಿಸಿದಾಗ ಅದು ಶುಭಾಳ ಹೆಸರಿಗೆ ಬಂದಿತ್ತುನಾನು ತೆಗೆಯಬೇಕಾ ಬೇಡವ ಅನ್ನೋ ಗೊಂದಲದಲ್ಲೇ ಇದ್ದೆತುಂಬಾ ಅಲೋಚನೆಗಳ ನಂತರ ತೆರೆದುನೋಡಿದೆ ಅದರಲ್ಲಿ ಹೊಸ ಒನ್ ಪ್ಲಸ್ ಮೊಬೈಲು ಇತ್ತುನಂಗೆ ಅಚ್ಚರಿಯಾಯಿತುಕರೆಮಾಡಿದಾಗ ಬಯ್ಸಿಕೊಂಡ ಬೇಜಾರು ಬೇರೆ ಇತ್ತುಅವಳು ಕೇಳಿದರೆ ದುಡ್ದು ಕೊಡೋಣ ಅಂತ ನಿರ್ಧರಿಸಿ ನಾ ಬಳಸಲು ಶುರುಮಾಡಿದೆಯಾವುದೆ ಕರೆಯಾಗಲಿ, ಯಾರಾದರೂ ಕೇಳಿಕೊಂಡು ಬರೋದು ಆಗಲಿ ಆಗಲಿಲ್ಲನನಗೂ ಆಗಾಗ ಕೊರೆಯುತ್ತಿತ್ತು.

ಇನ್ನೊಂದು ದಿನ ಮನೆ ಒರೆಸುವಾಗ ಗೋಡೆ ಗಡಿಯಾರ ಬಿದ್ದು ಗ್ಲಾಸಿನ ಹೂ ಕುಂಡ ಮತ್ತು ಗಡಿಯಾರ ಒಡೆದು ಹೋಗಿತ್ತುಮರುದಿನ ಸಂಜೆ ಎರಡು ಪಾರ್ಸೆಲ್ಗಗಳು ಮನೆ ಮುಂದೆ ಬಿದ್ದಿದ್ದವುತೆರೆದು ನೋಡಿದಾಗ ಗಡಿಯಾರ ಮತ್ತು ಹೂ ಕುಂಡ ಅದರಲ್ಲಿತ್ತುಎಂದಿನಂತೆ ಅದರಲ್ಲಿ ಶುಭಾಳ ಹೆಸರಿತ್ತುಇದು ಮತ್ತೂ ಮುಂದುವರೆಯಿತುಮನೆಯಲ್ಲಿ ಅಕ್ಕಿ ಖಾಲಿಯಾದಾಗಬೆಕ್ಕಿನ ಫುಡ್ಡು ಖಾಲಿಯಾದಾಗಟಿ.ವಿರಿಮೋಟು ಸರಿಯಾಗಿ ಕೆಲಸ ಮಾಡದೇ ಇದ್ದಾಗಲು ಮಾರನೇ ದಿನ ಸಂಜೆ ಅವೆಲ್ಲ ಪಾರ್ಸೆಲ್ ರೂಪದಲ್ಲಿ ಶುಭಾಳ ಹೆಸರಿನಲ್ಲಿ ಮನೆಯ ಮುಂದೆ ಬಿದ್ದಿರುತ್ತಿದ್ದವುನನಗೆ ಎಲ್ಲೋ ಏನೋ ಸರಿಯಾಗಿಲ್ಲ ಅನಿಸಿ ಧೈರ್ಯ ತೆಗೆದುಕೊಂಡು ನೇರವಾಗಿ ಮಾತನಾಡಬೇಕೆಂದು ಟಿ.ಎಸ್.ಹೆಚ್ ಆಸ್ಪತ್ರೆ ಬಳಿಗೆ ಹೋದೆರಿಸೆಪ್ಷನಿಸ್ಟ್ ನನ್ನ ಮುಂದೆ ಕರೆಮಾಡಿದರುಶುಭಾ ಯಾವುದೋ ಕಮ್ಯುನಿಟಿ ಹೆಲ್ತ್ ಸರ್ವಿಸ್ ಚಟುವಟಿಕೆಯಲ್ಲಿ ಇರುವುದಾಗಿಯೂ ಬರುವುದು ತಡವಾಗುವುದಾಗಿ ಹಾಗೆ ತಾನು ಯಾರನ್ನು ಮೀಟ್ ಮಾಡಲು ಇಷ್ಟವಿಲ್ಲವೆಂದು ಕಡ್ಡಿ ತುಂಡು ಮಾಡಿದ ಹಾಗೆ ಮಾತಾಡಿದ್ದಳು. ಅಲ್ಲೆಲ್ಲಾ ನೀಲಿ ಬಣ್ಣದ ಮೆಡಿಕಲ್ ಸ್ಕ್ರಬ್ ಧರಿಸಿ ನರ್ಸುಗಳು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರು. ನನಗೆ ಶುಭಾಳನ್ನು ಗುರುತು ಹಿಡಿಯಲು ಎಡ ಭಾಗದ ಎದೆಯ ಮೇಲಿದ್ದ ಹೆಸರಿನ ಬಿಲ್ಲೆಯ ಮೇಲೆಯೇ ಅವಲಂಬಿಸಬೇಕಾಗಿತ್ತುಈ ರಿಸೆಪ್ಷನಿಸ್ಟ್ ಮುಖಕ್ಕೆ ಮುಖ ಕೊಟ್ಟು ಮಾತಾಡದೇ ಇದ್ದುದರಿಂದ ಇವಳ ಮುಂದೆ ಎಲ್ಲಾ ಕಥೆ ಹೇಳುವುದು ಅನವಶ್ಯಕವೆನಿಸಿ ಕಾಯಲು ನಿರ್ಧರಿಸಿದೆಐದಾರು ಘಂಟೆ ಕಾದರು ಶುಭಾಳ ಸುಳಿವು ಸಿಗಲಿಲ್ಲ.

ನಿರಾಸೆಯಿಂದ ನಾನು ವಾಪಸ್ಸು ಬಂದೆಬಾಗಿಲಲ್ಲಿ ಒಂದು ಪಾರ್ಸೆಲ್ಲು ಬಿದ್ದಿತ್ತುನಂಗೆ ಮತ್ತಷ್ಟು ಭಯವಾಯಿತುಅನಿರೀಕ್ಷಿತವಾಗಿ ಬರುತ್ತಿದ್ದ ಪರ್ಸೆಲ್ಲುಗಳು ನನ್ನ ಗೊಂದಲಕ್ಕೀಡು ಮಾಡಿದ್ದವು. ಅದನ್ನು ತೆಗೆದು ನೋಡದೇ ಮನೆಯ ಒಂದು ಬದಿಯಲ್ಲಿ ಇಟ್ಟೆ.  ಯಾರು ಕಳುಹಿಸುತ್ತಿರಬಹುದುಯಾಕೆ ಕಳುಹಿಸುತ್ತಿದ್ದರೆ ಎಂದು ತಿಳಿಯುವುದು ನಂಗೆ ಮತ್ತಷ್ಟು ಜಟಿಲವೆನಿಸಿತುಇದ್ದ ಸ್ಥಿತಿಯಲ್ಲೇ ಮನೆ ಬಿಟ್ಟು ಓಡಿಹೋಗಬೇಕೆಂದುಕೊಂಡೆಕೊನೆಯ ಪ್ರಯತ್ನ ಎನಿಸಿ ಪ್ರಸಾದ್ ಅವರಿಗೆ ಕರೆಮಾಡಿ ಎಲ್ಲ ವಿಷಯ ಹೇಳಿದ್ದೆ.

ಅವರ ಸಲಹೆಯಂತೆ ಸಿಸಿಟಿವಿ ಅಳವಡಿಸಿ ಇಂಟರ್ನೆಟ್ಟಿನ ಮೂಲಕ ಮಾನಿಟರ್ ಮಾಡಲು ನಿರ್ಧರಿಸಿದೆಒಂದೇ ದಿನದಲ್ಲಿ ಎಲ್ಲ ವ್ಯವಸ್ಥೆಯಾಯಿತು. ನಾದರು ಅನುಚಿತವಾದುದ್ದು ನಡೆದರೆ ತಕ್ಷಣವೇ ಕರೆಮಾಡಬೇಕೆಂದು ಪ್ರಸಾದ್ ಹೇಳಿದ್ದರುನಾನು ಆಫಿಸಿನಲ್ಲಿ ಲ್ಯಾಪ್ ಟಾಪ್ ಮೂಲಕ ನಾಲ್ಕು ಕ್ಯಾಮೆರಗಳ ಚಲನವಲನಗಳನ್ನು ಗಮನಿಸುತ್ತಾ ಕೂತೆಮೊದಲ ಎರಡು ಗಂಟೆ ಏನೂ ನಡೆಯಲಿಲ್ಲಬೆಕ್ಕು ಕಿಟಕಿ ಬಳಿ ಕೂತು ಹೊರಗೆ ನೋಡುತ್ತಿತ್ತುಬಾಗಿಲ ಬಳಿ ಏನೋ ಸದ್ದಾಯಿತುಬೆಕ್ಕು ಆ ಕಡೆ ತಿರುಗಿತು ಯಾರೋ ಒಬ್ಬರು ಒಳಬಂದರು. ಮಹಿಳೆಯೋ ಹುಡುಗಿಯೋ ತಿಳಿಯಲಿಲ್ಲ. ಉದ್ದ ಜಡೆ. ತಿಳಿ ಹಳದಿ ಬಣ್ಣದ ಚೂಡಿದಾರೂ ಧರಿಸಿದ್ದಳು. ಅನಾಯಾಸವಾಗಿ ಕೀ ಮೂಲಕ ಬಾಗಿಲು ತೆಗೆದು ಒಳಗೆ ಅಡಿಯಿಟ್ಟು ಫ್ರಿಡ್ಜ್ ಒಳಗಿಂದ ಡಯಟ್ ಕೋಕ್ ಹೀರುತ್ತ ಟಿವಿ ಶುರುಮಾಡಿ ಸೋಫಾ ಮೇಲೆ ಕುಳಿತುಕೊಂಡಳು. ಮತ್ತೆ ಎದ್ದು ಕಿಟಕಿಯಿಂದ ಅವಳೆಡೆಗೆ ಧಾವಿಸುತ್ತಿದ್ದ ಬೆಕ್ಕಿನ ಮೈದಡವಿಮುದ್ದಿಸಿದಳು.

ನಾನು ಪ್ರಸಾದ್ ಅವರಿಗೆ ಆಗಲೇ ಕರೆಮಾಡಿ ಮನೆಯೊಳಗೆ ಯಾರೋ ನುಸುಳಿರುವ ಬಗ್ಗೆ ಹೇಳಿದೆ. ಅದಾಗಲೇ ಅವರು ಸಿಬ್ಬಂದಿಗಳೊಂದಿಗೆ ಹೊರಟಿದ್ದರೆಂದು ಹೇಳಿದರು. ಮ್ಯಾನೇಜರ್ ವಹಿಸಿದ್ದ ಕೆಲಸ ಬದಿಗಿರಿಸಿ ನಾನು ಕಂಪ್ಯೂಟರ್ ನಲ್ಲಿ ಆಗುತ್ತಿದ್ದ ಚಲನವಲನಗಳನ್ನೆಲ್ಲಾ ಗಮನಿಸುತ್ತಿದ್ದೆ‌. ಗ್ಯಾಸ್ ಸ್ಟೊವ್ ಮೇಲೆ ಏನೋ ಇಟ್ಟು ಬಿಸಿ ಮಾಡಿಕೊಂಡು. ಬೆಕ್ಕಿನ ಫುಡ್ಡು ತೆಗೆದು ಬಟ್ಟಲಲ್ಲಿ ಹಾಕಿಟ್ಟಳು. ಬೆಕ್ಕು ಉತ್ಸಹದಿಂದ ತಿನ್ನತೊಡಗಿತು. ವಾಷಿಂಗ್ ಮಶೀನಲ್ಲಿ ಕೆಲವು ಬಟ್ಟೆಗಳನ್ನು ಹಾಕಿ ಚಾಲು ಮಾಡಿದಳು ಈ ಕ್ಯಾಮೇರ ಒಂದರಲ್ಲಿ ಮಾತ್ರ ತುಸು ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನೊಂದು ಸ್ವಲ್ಪ ಹೆಚ್ಚು ವ್ಯಯಿಸಿದ್ದರೆ ಉತ್ತಮ ಕ್ವಾಲಿಟಿಯ ಕ್ಯಾಮೆರಾ ಬರುತ್ತಿದ್ದವೋ ಏನೋ. ಎಂತಹ ತಪ್ಪುಮಾಡಿದೆ ಅನಿಸಿತು. ಮತ್ತೆ ಆ ಕಡೆ ಗಮನ ಹರಿಸಿದೆ.

ಸ್ಕ್ರೀನಿನಮೇಲೆ ಅವಳು ಕಾಣಲಿಲ್ಲ. ಇದ್ದ ನಾಲ್ಕು ಕ್ಯಾಮೇರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ಕಾಣಲಿಲ್ಲ. ದುತ್ತನೆ ವಾಷಿಂಗ್ ಮಶೀನ್ ಹತ್ತಿರ ಸುಳಿದಾಡುತ್ತಿರುವುದು ಕಂಡಿತು. ಕ್ಯಾಮೆರಾಗಳನ್ನು ಮೇಲೆ ಇಟ್ಟಿದ್ದರಿಂದ ಅವಳುಮೇಲೆ ನೋಡದೇ ಮುಖ ನನಗೆ ಕಾಣುತ್ತಿರಲಿಲ್ಲ. ಏನೋ ಕೇಳಿಸಿದವಳಂತೆ ಜಡವಾಗಿನಿಂತಳು. ಬಾಗಿಲು ತಟ್ಟಿದ ಸದ್ದಾಯಿತು. ಅಂದುಕೊಂಡಂತೆ ಪ್ರಸಾದ್ ಮನೆ ಆಚೆ ನಿಂತು ಬಾಗಿಲು ಬಡಿಯುತ್ತಿದ್ದರು. ಮನೆಯಾಚೆಯ ಸಿಸಿಟಿವಿಯಲ್ಲಿ ನನಗೆ ಕಾಣುತ್ತಿತ್ತು.

ಅವಳು ಅವಾಕ್ಕಾಗಿ ವಾಶಿಂಗ್ ಮಶೀನಿನಲ್ಲಿದ್ದ ಬಟ್ಟೆ ಹೊರಗೆಳೆದಳು. ನಾನು ಗಮನಿಸಿಸುತ್ತಿದ್ದೆ.  ನೋಡನೋಡುತ್ತಿದ್ದಂತೆ ವಾಶಿಂಗ್ ಮಶೀನ್ ಪಕ್ಕದಲ್ಲಿ ಗೋಡೆಯ ಭಾಗವೇನೋ ಅನ್ನುವ ಹಾಗೆ ಸೊಂಟದವರೆಗೂ ಬರುತ್ತಿದ್ದ ಬಾಗಿಲು ಹೊರಗೆಳೆದು ಅದರೊಳಗೆ ಹೆಜ್ಜೆಯಿಟ್ಟಳು. ನಾನು ಮನೆಗೆ ಹೊಸದಾಗಿ ಬಂದಾಗ ಮನೆಯ ಸಾಮಾಗ್ರಿ ಇಡೋಕೆ ಪ್ಲಾನ್ ಇಲ್ಲದೇ ಮಾಡಿರೋ ಜಾಗ ಎಂದುಕೊಂಡು ನಿರ್ಲಕ್ಷಿಸಿದ್ದೆ. ಅದರೊಳಗೆ ಪೇರಿಸಿ ಇಟ್ಟಿದ್ದ ಹಲವಾರು ವಾಸ್ತುಗಳು ಕಣ್ಣಿಗೆ ಬಿದ್ದವು. ಒಂದೆರಡು ಸಿರಿಂಜುಗಳು, ಒಮ್ಮೆ ಬಳಸಿ ಬಿಸಾಡುವ ಮಾಸ್ಕುಗಳು, ನೀಲಿ ಬಣ್ಣದ ನರ್ಸುಗಳು ಬಳಸುವ ಅಂದು ಆಸ್ಪತ್ರೆಯಲ್ಲಿ ಗಮನಿಸಿದ ಮೆಡಿಕಲ್ ಸ್ಕ್ರಬ್ಗಳು ಇಲ್ಲಿ ಇದ್ದವು. ಆ ಎಸಿ ರೂಮಿನಲ್ಲೂ ಕೂತಲ್ಲೇ ನಾನು ಬೆವರತೊಡಗಿದೆ. ಅದೇ ಸಮಯಕ್ಕೆ ನನ್ನ ಮೊಬೈಲಿಗೆ ಕರೆ ಬಂದಿತು. ಪ್ರಸಾದ್ ಮನೆಯ ಹೊರಗೆ ನಿಂತು ಕರೆಮಾಡುತ್ತಿದ್ದರು‌. ಪಾರ್ಸೆಲ್ಲು ಬಂದಿದ್ದ ಮೊಬೈಲು ಯಾಕೋ ತನ್ನದಲ್ಲ ಅನಿಸಿ ಅದ ಮುಟ್ಟಲು ಮನಸಾಗಲಿಲ್ಲ . ಬೆಕ್ಕು ಬಾಗಿಲು ಮುಚ್ಚಿದ ಗೋಡೆಯ ಮುಂದೆ ಮೌನವಾಗಿ ಕುಳಿತುಕೊಂಡಿತ್ತು.

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

The Stillness Between Two Trees

ಆಲ್ ವಿ ನೀಡ್ ಇಸ್ ಚೇಂಜ್

ಅಪ್ಪ ನೀನ್ಯಾಕೆ ಹೀಗೆ....?