ಪ್ರೈವೆಸಿ
ಮೇ ತಿಂಗಳು.ನನ್ನ ಬರ್ತಡೆ ಮಂತು. ಪ್ರತಿ ಸಲದಂತೆ ಜನುಮದಿನದ ಹತ್ತಿರ ಹತ್ತಿರ ರಕ್ತದಾನ ಮಾಡೋದು ನಾ ರೂಢಿಸಿಕೊಂಡು ಬಂದ ಅಭ್ಯಾಸ. ಅದರ ಬಗ್ಗೆ ನಂಗೆ ಒಂದು ತೆರನಾದ ಹೆಮ್ಮೆ ಕೂಡ ಇತ್ತು. ಅದನ್ನ ಸ್ವಲ್ಪ ಜನರ ಬಳಿ ಹೇಳಿಕೊಳ್ಳುತ್ತಾ ಇರ್ತಿನಿ. ನಾನೂ ಸಹ ಹಲವು ವರ್ಷಗಳ ಹಿಂದೆ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮಾಡಿದ್ದ ಪೋಸ್ಟ್ ನೋಡಿ, ನನ್ನ ಬರ್ತ್ ಡೆ ದಿನ ಕೂಡ ಹೀಗೆ ಮಾಡಬಹುದಲ್ಲ ಅನಿಸಿ ಅದನ್ನ ಫಾಲೋ ಮಾಡೋಕೆ ಶುರು ಮಾಡಿದ್ದೆ. ರಕ್ತದಾನ ಮಾಡೋದು ಒಳ್ಳೆಯದೆ. ಎಷ್ಟು ಸಲ ಮಾಡಿದ್ದೇನೆ ಅಂತ ಲೆಕ್ಕ ಇರಲಿ ಅಂತ ಪ್ರಮಾಣಪತ್ರ (ಸರ್ಟಿಫಿಕೇಟ್) ಮರೆಯದೇ ಪಡೆದು ತರುತ್ತಾ ಇರ್ತಿನಿ. ರಕ್ತ ಪಡೆದವರ ಸಂಬಂಧಿಕರು ಇದ್ದರೆ, ಅವರು ನನಗೆ ಥ್ಯಾಂಕ್ಸ್ ಹೇಳೋದು ಪ್ರತಿಯಾಗಿ ನಾ ಅವರಿಗೆ ಒಂದಷ್ಟು ಸಮಧಾನದ ಮಾತು ಹೇಳೋದು ಕೂಡ ನಡೆಯುತ್ತದೆ. ಒಂದೆರಡು ವರ್ಷದ ಹಿಂದೆ ಇದರಿಂದಾಗಿ ನನ್ನಲ್ಲಿ ಮೂಡಿದ ತುಸು ಅಹಂಕಾರದ ನೀರಿನ ಗುಳ್ಳೇ ಪಟ್ಟನೆ ಒಡೆದುಹೋಗೋ ಪ್ರಸಂಗವೊಂದು ನಡೆಯಿತು. ಅದರಿಂದ ನಾ ಕಲಿತದ್ದು ಜಾಸ್ತಿ. ಮೇ ಕೊನೆಯ ವಾರ ರಕ್ತದಾನ ಮಾಡ್ಬೇಕು ಅಂತ ಡಿಸೈಡ್ ಮಾಡ್ಕೊಂಡಿದ್ದೆ. ಕೆಲಸ ಮಾಡುವಾಗ ನಾನು ಮೆಂಬರ್ ಆಗಿದ್ದ ವಾಟ್ಸಪ್ಪು ಗ್ರೂಪಿನಲ್ಲಿ. ತುಮಕೂರು ಜನರಲ್ ಹಾಸ್ಪಿಟಲ್‌ನಲ್ಲಿ ಯಾರೋ ಪೇಶಂಟಿಗೆ ಓ ಪಾಸಿಟಿವ್ ರಕ್ತದ ತುರ್ತು ಅವಶ್ಯಕತೆ ಇದೆ ಎಂದು ಮೆಸೇಜು ಬಂದು ಗುದ್ದಿತು. ಕಾಂಟ್ಯಕ್ಟ್ ನಂಬರಿಗೆ ಕ...