ಪೋಸ್ಟ್‌ಗಳು

ಕಿವುಡು ಕಾಂಚಾಣ

  ಲಭ್ಯವಿದ್ದ ಮಾಹಿತಿಗಳು ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪೂರಕವಾಗಿರಲಿಲ್ಲ. ನಿರ್ಧಾರದ ನಿರೀಕ್ಷೆಯಲ್ಲಿದ್ದವರು ಪದೇ ಪದೇ ಕರೆಮಾಡುತ್ತಿದ್ದರು. ವರ್ಷಗಳ ಕೆಳಗೆ ಕೆಲಸಕ್ಕೆ ಸೇರುವಾಗ Decision Making ಬಗ್ಗೆ ಪುಂಖಾನುಪುಂಖವಾಗಿ ಇಂಟರ್ವ್ಯೂನಲ್ಲಿ ಕೊಚ್ಚಿಕೊಂಡಿದ್ದು ಪೇಲವವೆನಿಸಿತು. ಈ ಇಳಿಸಂಜೆಯಲ್ಲಿ ಬಿಸಿಲುಕೋಲು ಕೀಬೋರ್ಡು ಹಾಗು ಅದಕ್ಕಂಟಿದ  ಕೈಗಳ ಮೇಲೂ ಹಾದುಹೋಗಬಾರದೇಕೆ ಎಂದುಕೊಳ್ಳುತ್ತಿದ್ದೆ. ಮೂರ್ನಾಲ್ಕು ಸಾರಿ ಗ್ರಾಮರ್ರು ನೋಡಿ ಒಂದು ಮೇಲು ಕಳುಹಿಸಿ ಹೊರಡಲು ಸಿದ್ಧನಾದೆ. ನಾ ಬರೆದದ್ದು ಓದುವರರ ತೆಕ್ಕೆಗೆ ಹಾಕುವವರೆಗೂ ನಾನು ಚಿಂತಿತ. ಆಮೇಲೆ ಸರಾಗ. ಬರೆದದ್ದನ್ನ ಜೊತೇಲಿ ಕಾಪಿಟ್ಟುಕೊಳ್ಳೋದಾದರೂ ಎಂತಕ್ಕೆ, ಹಾಗೆ ಅತೀ  ಪೇರೆಂಟಿಂಗು ಮೂಡೋದು ಕೂಡ ಈ ಕಾಲದಲ್ಲಿ ಒಳ್ಳೆದಲ್ಲ ಅಲ್ವ.      ಬರೆಯೋದರ ಬಗ್ಗೆ ಹೇಳ್ಬೇಕು. ಮೊದಲು ಏನಾದರೂ ಬರೆದರೆ ಹಂಚಿಕೊಳ್ಳುವಷ್ಟು ಧೈರ್ಯವಂತೂ ಇರಲಿಲ್ಲ . " ಇಷ್ಟು ಬಾಲಿಶವಾಗಿದ್ಯಲ್ಲ ಗುರು" ಅನಿಸಿ ಡಿಲೀಟು ಮಾಡಿ ಬಿಸಾಕಿದ್ದಿದೆ . ಹೇಗೋ ತೆವಳುತ್ತಾ ಸಾಗುತ್ತಾ ಇಲ್ಲಿಯವರೆಗೂ ಬಂದಿದ್ದೇನೆ . ಆಗಾಗ್ಗೆ  ಏನಾದರೂ ಬರೀಬೇಕು ಅಂತ ಅಂದು ಕೊಳ್ತಾ ಇರ್ತಿನಿ. ಅವತ್ತು ಸಂಜೆ  ನಾಲ್ಕು ಮುಕ್ಕಾಲು ಗಂಟೆಗೆ ಬ್ರಾಂಚಿನ ಗ್ರಿಲ್ ಗೇಟು ಬಡಿಯುತ್ತಾ ಮಗನಿಗೆ ಆಸ್ಪತ್ರೆಗೆ ದುಡ್ಡು ಬೇಕು ದಯವಿಟ್ಟು  ಕೊಡಿ ಎಂದು ಯಾವಾಗಲೋ ತಣ್ಣಗಾ...

ಕ್ರಿ.ಪೂ.ದ ಕತೆಗಳು

ಕ್ರಿ.ಪೂ ಸುಮಾರು 500-600 ವರ್ಷಗಳಿರಬೇಕು. ಸಾಮ್ರಾಜ್ಯದ ಎಲ್ಲೆಡೆ ಕೋಲಾಹಲ. ಪ್ರಜೆಗಳಿಗೆ ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ. ರಾಜನ ಆಸ್ಥಾನಕ್ಕೆ ಲಗ್ಗೆ ಇಟ್ಟರು. ಕೈಮುಗಿದು ಬೇಡಿಕೊಂಡರು. 'ಬೆಳೆದ ಬೆಳೆಗಳನ್ನೆಲ್ಲಾ ಸಸ್ಯಹಾರಿ ಪ್ರಾಣಿಗಳು ತಿಂದು ಹಾಕುತ್ತಿವೆ. ಸಾಕು ಪ್ರಾಣಿಗಳನ್ನು ಕಾಡುಮೃಗಗಳು ನಾಡಿಗೆ ಬಂದು ಕದ್ದೊಯ್ಯುತಿವೆ' ಇದಕ್ಕೆ ಪರಿಹಾರ ಮಾಡಿಕೊಡಿರೆಂದು ಕೇಳಿದರು. ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಯುವರಾಜನಿಗೆ ತಲೆಕೆಟ್ಟು ಹೋಯಿತು. ಇದಕ್ಕೆಲ್ಲಾ ಪರಿಹಾರ ಮಾಡ್ಬೇಕು ಅಂತ ನಿರ್ಧರಿಸಿ, ಪ್ರಾಣಿಗಳ ವಧಿಸಬೇಕೆಂದು ತೀರ್ಮಾನಿಸಿದ. ಸೈನ್ಯದಲ್ಲಿ ನಿಪುಣಾತಿ ನಿಪುಣರನ್ನು ಸೆಲೆಕ್ಟ್ ಮಾಡಿದ್ದಾಯ್ತು. ಆಗಿನ್ನೂ ಅಧಿಕಾರ ಹಸ್ತಾಂತರಿಸಿದ್ದ ಮಹಾರಾಜ ಕೂಡ ಜೋತೆಲಿ ಬರ್ತೀನಿ ಅಂದ.   ಮಧ್ಯಾಹ್ನದೊಟ್ಟಿಗೆ ಪ್ರಾಣಿ ವಧೆ ಒಂದಷ್ಟು ಹದಕ್ಕೆ ಬಂತು .   ಕಾಡು ಮೇಡು ಅಲೆಯುತ್ತಾ ಮಹಾರಾಜ ಒಂದು ಸುಂದರ ಸರೋವರದ ಬಳಿ ಕುಳಿತ . ಅದು ಅಂತಿಂಥ ಸರೋವರವಲ್ಲ ಅದರ ಸುತ್ತ ಇದ್ದ ಎಲ್ಲಾ ನಿರ್ಜೀವ ವಸ್ತುಗಳು ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದವು . ಮಹಾರಾಜನಿಗೆ ಆಶ್ಚರ್ಯವಾಯಿತು . ಸೂಕ್ಷ್ಮವಾಗಿ ಗಮನಿಸಿದ . ಸಣ್ಣ ಗಿಡ ಗೆಂಟೆಗಳು ಬೃಹದಾಕರವಾಗಿ ಬೆಳೆದಿದ್ದ ಮರಗಳ ವಿರುದ್ಧ ಮಹಾರಾಜನಲ್ಲಿ ದೂರಿತ್ತವು . “ ಬೆಳೆದು ದೊಡ್ಡವಾದ ಮೇಲೆ ಮರಗಳು ಮೇಲಿನಿಂದ ಮಾತಾಡುವುದು ನಮಗೆ ಕೇಳಿಸುವುದಿಲ್ಲ ಆದಾಗ್ಯೂ ಹೋಗಲಿ ಅಂತ ಒಂದು ಕಥೆಯನ್ನೂ ...

ಪ್ರಮೇಯಾ

ಅಲಾರಮ್ ಆಗಲೇ ನಾಲ್ಕೈದು ಬಾರಿ ಬಾಯ್ ಬಡಿದುಕೊಂಡಿತ್ತು.  ಎದ್ದು ಅರಸಿಕೆರೆಯ ಸರ್ಕಾರಿ ಪಿಯು ಕಾಲೇಜಿನ ಮೈದಾನದ ಸುತ್ತಾ ಏಳೆಂಟು ಸುತ್ತು ಹೊಡೆಯುವುದರೊಳಗೆ ಏದುಸಿರು ಬಿಡುವಂತಾಗಿತ್ತು. ಆಗತಾನೆ ಮೈದಾನಕ್ಕೆ ಕಂಪೌಂಡು ಕಾಮಗಾರಿ ನಡೆಯುತ್ತಿದೆ. ಪುಟ್ಟ ಪುಟ್ಟ ಭರ್ಜಿಯಾಕಾರದಲ್ಲಿದ್ದ ಚೂಪಾದ ಕಂಬಿಗಳನ್ನು ಆಗಿನ್ನು ಮಡ್ಡಿಕಲಸಿ ನಿರ್ಮಿಸಿದ್ದ ಗೋಡೆಯ ಹೊಟ್ಟೆ ಬಗೆದು ನೆಡುತ್ತಿದ್ದರು. ಮೈದಾನದ ಗೇಟಿನ ಬಳಿ ಕೆಲವು ಹಿರಿಯ ನಾಗರಿಕರಿಗೆ ಅದ್ಯಾರೋ ತರುಣಿ ವೈದ್ಯರಂತೆ ಬಿಳಿ ಬಟ್ಟೆ ತೊಟ್ಟು ಮೈಕಿಡಿದು ಇದಾವುದೋ ನೀಲಿಕಲರಿನ ಮುಲಾಮು ಹೇಗೆ ಮಂಡಿನೋವನ್ನು ಶಮನಗೊಳಿಸಿತು ಎಂದು ಸವಿವರವಾಗಿ ಕೇಳುತ್ತಿದ್ದಳು. ಪಕ್ಕದಲ್ಲೆ ವೃತ್ತಾಕಾರದಲ್ಲಿದ್ದ ಕಸದ ಸಿಮೆಂಟು ಬ್ಲಾಕ್‌ಗೆ ತುಂಬಾ ದಿನವಾದ್ದರಿಂದಲೋ ಏನೋ ತುಂಬಿಹೋಗಿದ್ದ ಕಸದ ರಾಶಿ ತನ್ನ ಇರುವಿಕೆಯನ್ನು ಸುತ್ತಾ ನೂರಾರು ಮೀಟರ್‌ಗಳವರೆಗೂ ಸಾರಿ ಹೇಳುತ್ತಿತ್ತು.ನೋಡನೋಡುತ್ತಲೆ ಚಂಗನೆ ಅದರ ಮೇಲೆ‌ ಎಗರಿದ ಬೀದಿನಾಯಿಗಳು ಕಪ್ಪುಬಣ್ಣದ ಕವರನ್ನು ಕಚ್ಚಿಕೊಂಡು ರಪರಪನೆ ತಲೆಬಡಿದು ಅದರಲ್ಲಿ ಬೆಚ್ಚಗೆ ಕೂತಿದ್ದ ಡಯಪರುಗಳನ್ನು ಅರೆಕ್ಷಣದಲ್ಲಿ ರಸ್ತೆಯ ತುಂಬೆಲ್ಲಾ ಹರಡಿದವು. ಹರಿದು ಅರೆಜೀವವಾಗಿದ್ದ ಕವರನ್ನು ಹಿಡಿದು ನಾಯಿಯೊಂದು ಮಿನಿ ವಿಧಾನಸೌದದ ಕಡೆ ಓಡಿತು‌‌. ಅದರ ಹಿಂದೆ ಕಿಂದರಿಜೋಗಿಯ ಅನುಸರಿಸಿ ಹೊರಟ ಮಕ್ಕಳಹಿಂಡಿನಂತೆ ಉಳಿದ ನಾಯಿಗಳು ಕೂಡ ಹಿಂಬಾಲಿಸಿದವು. ರಸ್ತೆಯ ತುಂಬಾ ಹತ್ತಿ ಉಂಡೆಗಳಂತ...

ಚಿಲ್ಲರೆ ಕಥೆಗಳು

"ಏನು ಶಬ್ದಾನೇ ಬರ್ತಿಲ್ಲ ಅಂದ್ರೆ, ನಿಮಗೆ ಕಿವಿ ಹೋದ್ವ ಇಲ್ಲ ಗಂಟೆಗೆ ನಾಲಗೆ ಬಿದ್ದೋಯ್ತಾ". ತುಸು ಕೋಪದಲ್ಲೇ ಕಾರ್ಯದರ್ಶಿಗಳು ಹೇಳಿದರು. ನೆನ್ನೆಯಿಂದ ದೇವಸ್ಥಾನದ ಗಂಟೆಯಲ್ಲಿ ಶಬ್ಧವೇ ಹೊಮ್ಮುತ್ತಿಲ್ಲ ಅನ್ನೋದು ಹೇಳೋಕೆ ಅರ್ಚಕರು ದರ ದರನೇ  ಓಡಿಬಂದು ಮನೆಯ ಬಾಗಿಲ ಬಳಿ ಬಿಸುಟ ಅರ್ಚಕರ ಉಂಗುಷ್ಟ ಕಿತ್ತುಹೋದ ಹವಾಯಿ ಚಪ್ಪಲಿಗೆ ಜೀವದಾನವೆಂಬಂತೆ ಹಾಕಿದ್ದ ಪಿನ್ನು ತನ್ನೆಲ್ಲಾ ಶಕ್ತಿ ತೊರೆದು ಉಂಗುಷ್ಟದೊಂದಿಗೆ ಹೊರಬಂದಿತು. ಸರಿ ನೋಡೋಣ ಅಂತ ಇಬ್ಬರು ದೇವಸ್ಥಾನದ ಹಾದಿ ಹೂಡಿದರು.  ಇದಿರು ಸಿಕ್ಕ‌ಮನುಷ್ಯನ ಆಕೃತಿಗೆ ಎಂತದೋ ಕುತೂಹಲ ಎನಿಸಿ " ದೇವಸ್ಥಾನದ ಲೆಕ್ಕದಲ್ಲಿ ಮಿಸ್ಟಿಕ್ ಆಯಿತ. ಏಕಿಷ್ಟು ಅವಸರ" ಎಂದು ನಕ್ಕಿತು.ಅರ್ಚಕರಿಗೆ ಏನು ಹೇಳಬೇಕು ತೋರಲಿಲ್ಲ. ಅಲ್ಲೆ ನಿಂತು "ಇಲ್ನೋಡಿ ದೇವಸ್ಥಾನದ..." "ಆರ್ಚಕರೇ ದೇವರೇ ಇಲ್ಲ‌ ಅನ್ನೋ ನಾಸ್ತಿಕ ಅವನು, ಅವನಿಗ್ಯಾಕೆ ಇವೆಲ್ಲಾ ಹೇಳ್ತಿರಾ. ನಡಿರಿ ಸುಮ್ನೆ" ಕಾರ್ಯದರ್ಶಿಗಳು ಮತ್ತಷ್ಟು ಕೆಂಡವಾದರು. ಆ ಮನುಷ್ಯ ಆಕೃತಿ ಅಲ್ಲೆ ನಿಂತು ಏನನ್ನೋ ಯೋಚಿಸುತ್ತಿತ್ತು ಅದಕ್ಕೆ ನೆರಳಿರಲಿಲ್ಲ. ದೇವಾಲಯಕ್ಕೆ ಬಂದ ಕಾರ್ಯದರ್ಶಿಗಳು ಎಡೆಬಿಡದೇ ಗಂಟೆಯೊಡೆದು ಆರ್ಚಕರ ಮುಖ ನೋಡಿದರು. ಮೂಲೆಯಲ್ಲಿ ಮಲಗಿದ್ದ ಬೀದಿನಾಯಿಯೊಂದು ಅನಿರೀಕ್ಷಿತವಾಗಿ ಎರಗಿದ ಸದ್ದಿಗೆ ಎಚ್ಚರಗೊಂಡು ನೋಡತೊಡಗಿತು.  ಕಾರ್ಯದರ್ಶಿಗಳು ಗುಡುಗಿ ಹೋದನಂತರ ಆರ್ಚಕರು ಪ್ರಯತ್ನಿಸಿದ...

ಹಲೋ......

<---ಸತ್ತವರ ಜೊತೆ ನೀವು ಈ ದೂರವಾಣಿಯ ಮೂಲಕ ಮಾತನಾಡಬಹುದು. ನಿಮ್ಮ ದುಃಖ ದುಮ್ಮಾನಗಳನ್ನು ಕೇಳುವುದು ಹೇಳುವುದು ಏನಾದರೂ ಇದ್ದರೇ ಇಲ್ಲಿರುವ ಫೋನ್‌ಬೂತಿನ ಮೂಲಕ ಕೇಳಬಹುದಾಗಿದೆ.---> ವಾಟ್ಸಪ್ಪಿನಲಿ ದುತ್ತನೆ ಬಂದ ಜಾಹಿರಾತು ಬೆನ್ನತ್ತಿ ಅಡ್ರೆಸ್ಸು ಹುಡುಕಿದಾಗ ನಮ್ಮ ಮನೆಯಿಂದ 173 ಕೀ.ಮಿ ದಕ್ಷಿಣಕ್ಕೆ ಇರುವ ಅಮೃತೂರಿನ ವಾಣಿಜ್ಯ ಸಂಕೀರ್ಣದ ನೆಲಮಹಡಿಯ ವಿಸ್ತಾರವಾದ ಕಂಪೌಂಡಿನ ಅಂಗಳದಲ್ಲಿ ಏಕಾಂಗಿಯಾಗಿ ನಿಂತಿದ್ದ ಫೋನ್ ಬೂತ್‌ನ ಕಡೆ ತೋರಿಸಿತ್ತು. ಗೂಗಲ್ ಮ್ಯಾಪಿನಲ್ಲಿ ಅಷ್ಟೇನು ಆಸಕ್ತಿದಾಯಕ ರಿವ್ಯೂಗಳೇನು ಇರಲಿಲ್ಲ. ಆದರೂ ನನಗೆ ಹೋಗಬೇಕೆನಿಸಿತು. ಅಪ್ಪನಿಗೆ ಇಷ್ಟೆಲ್ಲಾ ನಾನು ಬಿಡಿಸಿ ಹೇಳಿರಲಿಲ್ಲ. "ನೀನೆಷ್ಟು ದಡ್ಡಿ ಅಂದ್ರೆ ಯಾರಾದ್ರೂ ಸಿಕ್ಕಾಪಟ್ಟೆ ಪ್ರಾಚೀನ ಕಾಲದ ಪೋನಲ್ಲಿ ಮಾತಾಡೋಕೆ ಅಂತ 170 ಕಿಮಿಗಟ್ಟಲೆ  ಹೋಗ್ತಾರಾ??" ರಿಂಗ್  ರೋಡಿಗೆ ಕಾರಿನ ತನ್ನೆರಡು ಚಕ್ರಗಳನ್ನು ತಾಗಿಸುತ್ತ ಅಪ್ಪ ಅಂದ. ಸಣ್ಣ ಕಿರಿಕಿರಿ ಅವನ ಮಾತಲ್ಲಿತ್ತು. "ಅಪ್ಪ... ಸುಮ್ನೆ ಹೋಗಣ ಈಗ. ಇದೆಲ್ಲ ನೆನ್ನೆನೆ ಮಾತಾಡಿದ್ವಲ್ಲ. ಅದು ಮುಗಿಸಿ ನಿನ್ನ ಪೆನ್ಷನರ್ಸ್ ಕ್ಲಬ್ಬಿನಲ್ಲಿ ಹರಟೆ ಟೀಮಿನವರಿಂದ ಹರಟೆ ಪ್ರೋಗ್ರಾಮಿಗೆ ನಾನು ಜೊತೆಯಲ್ಲೇ ಬರ್ತಿನಿ ಹೋಗಣ ನಂಗೂ ಒಂತರ ಚೇಂಜಸ್ ಅನಿಸತ್ತೆ" ಕೀರ್ತಿ ಒಂದೆ ಉಸಿರಲ್ಲಿ ಹೇಳತೊಡಗಿದಳು. ಕಾರು ನೂರರ ವೇಗದಲ್ಲಿ ಸಾಗುತ್ತಿತ್ತು. ಮಳೆಬಂದು ಕಡುಕಪ್ಪುಬಣ್ಣವನ್ನು ಮೈಮೇ...