ಪೋಸ್ಟ್‌ಗಳು

The Stillness Between Two Trees

Every day, along my usual running path, I pass a quiet, two-story house that feels like it’s been paused in time. Its gate, once sturdy and proud, now rusts gently under years of sun and monsoon. Ivy creeps through its bars, as though nature is reclaiming what was once hers. Towering on either side, two majestic Parijatha trees stand like sentinels — their fragrance spilling into the air like a silent hymn. And nestled humbly between them lies an old blue Ambassador car, swaddled in a thick green tarpaulin. That car — it’s been there for years. Unmoving. Undisturbed. Sleeping. I first noticed it as I ran past on cooler mornings, my skin warm from exertion and my breath chasing the breeze. The car looked almost holy in its stillness — a relic resting not in abandonment, but in peace. The dust had blanketed it like a soft shroud. Its tires, long deflated, seemed welded to the earth itself. No signboard explained its story. But its silence was loud. It spoke of journeys taken, of laughter...

The case for Kannada in Banking

The banking sector stands as the backbone of any nation's economic system. It's not merely a place for financial transactions but an integral part of the daily lives of millions. In a linguistically diverse country like India, the availability of banking services in local languages is paramount. In the context of Karnataka, the use of Kannada in the banking sector and the representation of Kannadigas is a sensitive and crucial matter. First, it's essential to understand why the use of Kannada in banking services is so vital. The majority of customers visiting banks are ordinary people. Farmers, small traders, daily wage earners, senior citizens – people from various strata of society often find it difficult to transact in English or Hindi. To clearly understand their financial dealings and receive services without confusion, a local language is indispensable. Whether it's applying for a loan, opening an account, writing a cheque, or utilizing online banking facilities –...

ಆಲ್ ವಿ ನೀಡ್ ಇಸ್ ಚೇಂಜ್

ಔಪಚಾರಿಕ ನಗು ಎಂಬುದು ಬೇಕೆಂದರೂ ಬೇಡವೆಂದರೂ ಕೆಲವು ಸಂದರ್ಭಗಳಲ್ಲಿ ಪಾಲಿಸಬೇಕಾದ ಧರ್ಮ. ಮೊದಲೆಲ್ಲ ನಿಷ್ಠೂರವಾದರೂ ಪರವಾಗಿಲ್ಲ, ಎಂದೂ ಇಂತಹ ಡ್ರಾಮಾಗಳನ್ನು ಮಾಡುವುದಿಲ್ಲ ಎಂದು ನಿರ್ಧರಿಸಿದ್ದೆ.  ದಿನಗಳುರುಳುತ್ತಾ ವ್ಯಾಪಾರ ವ್ಯವಹಾರಗಳ ಸೋಗಿನಲ್ಲಿ ಅದೆಲ್ಲಾ ಅಭ್ಯಾಸವಾಗಿದೆ. ವ್ಯಾಪಾರಸ್ಥನಾದವನು ಏನನ್ನೇ ಮಾರುವವನು ಎಂದೂ ನಗದೇ ಇರಬಾರದು ಎಂಬುದು ಪ್ರಚಲಿತ ಮಾತು. ನಮ್ಮಮ್ಮ ಕೆಲಸಕ್ಕೆ ಹೋಗೋಕೆ ಮುಂಚೆ “ ಯಾರ ಮೇಲೂ ರೇಗಬೇಡ, ಮಕ ಕೆಡುಸ್ಕೊಬೇಡ. ದಿನ ಅವರ ಜೊತೆನೆ ವ್ಯವಾರ ಮಾಡ್ಬೇಕು ” ಅಂತ ಹೇಳುವಳು.  ಬೆಳಗ್ಗೆ ಮನೆ-ಬಸ್ಟಾಂಡ್-ಆಫೀಸು ಸಂಜೆ ಆಫೀಸು - ಬಸ್ಸು - ಮನೆ ಎಂಬೋ ನಿರ್ಮಲ ದಿನಚರಿ ನನ್ನದು. ಒಂದೊಂದು ದಿನ ಏರುಪೇರಾದಾಗ “ ಯಾಕ್ ಬೇಕಿತ್ತು ಗುರು ಈ   ತಲೆನೋವುಗಳು.. ” ಅಂತಾನು ಅನಿಸುತ್ತಿರುತ್ತದೆ. ಅದೇನೆ ಇರಲಿ ಹೊಸತು ಯಾವಾಗಲೂ ಮುಳ್ಳಿನ ಹಾಸಿಗೇನೆ. ಅವತ್ತು ಅಂತದ್ದೆ ಒಂದು ಔಪಚಾರಿಕ ನಗು ಹೊತ್ತು ಮಧುಗಿರಿ ಖಾಸಗಿ ಬಸ್ಸು ಹತ್ತಿದ್ದೆ. ಬಸ್ಸಿನ  ಸೀಟುಗಳೆಲ್ಲಾ ತಕ್ಕಮಟ್ಟಿಗೆ ಭರ್ತಿಯಾಗಿದ್ದವು. ನಾನು ಬಸ್ಸಿನ ಎಡಬಾಗದಲ್ಲಿ ಕಿಟಕಿ ಪಕ್ಕದಲ್ಲಿ ಕೂತೆ. ಕಂಡಕ್ಟರ್ ಹತ್ತುವಾಗಲೇ ಯಾರಿಗೋ ಬಯ್ಯುತ್ತಾ ಕಟಿಕಟಿ ಹಲ್ಲು ಕಡಿಯುತ್ತಾ ಒಳಬಂದ. ಬಸ್ಸು ಹೊರಟಿತು. ಎಂದಿನಂತೆ ಕಂಡಕ್ಟರು ಯಲ್ಲಾಪುರ ಬೈಪಾಸು ದಾಟಿದಾಗ, ಟಿಕೇಟು ಕೊಡಲು ಶುರುಮಾಡಿದ. ಖಾಸಗಿ ಬಸ್ಸುಗಳು ಹತ್ತು ನಿಮಿಷಕ್ಕೊಂದರ...

ಅಪ್ಪ ನೀನ್ಯಾಕೆ ಹೀಗೆ....?

  ಅಪ್ಪ ನೀನ್ಯಾಕೆ ಹೀಗೆ....?   ಮೊನ್ನೆಯಷ್ಟೆ ತಮಿಳಿನ "ವಾಳೈ" ಸಿನಿಮಾ ನೋಡುತ್ತಿದ್ದೆ. ಶ್ರೀವೈಕುಂಡಮ್ ‍ ನಲ್ಲಿ ೧೯೯೯ರಲ್ಲಿ ನಡೆದ ಲಾರಿ ದುರಂತದಲ್ಲಿ ಮೃತರಾದ ೨೦ ಬಾಳೆಗೋನೆ ಸಾಗಣೆ ಮಾಡುತ್ತಿದ್ದ ಶ್ರಮಿಕರ ಕತೆ. ಬಾಲ್ಯವೇ ಮುಖ್ಯಭೂಮಿಕೆಯಲ್ಲಿರುವ ಸಿನಿಮಾವಾದ ಕಾರಣ ಅರ್ದ್ರತೆಯಿಂದ ಇಷ್ಟವಾಗುತ್ತದೆ. ಇದರಲ್ಲಿ ಒಂದು ದೃಶ್ಯ ನನ್ನನ್ನು ತುಂಬಾ ಕಾಡಿತು.   ಶಾಲೆಯ ಬಿಡುವಿನ ದಿನಗಳಲ್ಲಿ ಮಾಡುತ್ತಿದ್ದ ಬಾಳೆಗೊನೆಗಳ ಸಾಗಿಸುವ ಕೆಲಸಕ್ಕೆ ಬೇಸತ್ತು ಚಿತ್ರದ ಮುಖ್ಯಪಾತ್ರವೊಂದು ನೀರೊಳಗೆ ಅವುಗಳನ್ನು ಎಸೆದು ನೀರಿಗೆ ಜಿಗಿಯುವ   ಸನ್ನಿವೇಶ ಒಂದಿದೆ ‌ . ಅದು ನನಗೆ ಹನ್ನೊಂದನೆ ವರ್ಷದವನಿದ್ದಾಗ ಸಂಕ್ರಾಂತಿ ಹಬ್ಬದ ದಿನ ನೆನಪಿಗೆ ತಂದು ಬಾಯೆಲ್ಲಾ ಉಪ್ಪು ಒಗರು ಪಸೆ ನಾಲಿಗೆ ಮೇಲೆ ತಂದಿತು. ಅದಕ್ಕೆ ಬಹುಮುಖ್ಯ ಕಾರಣವೂ ಇದೆ.   ನನ್ನ ಅಪ್ಪ ಮರಗೆಲಸ ಮಾಡುತ್ತಿದ್ದ. ಅಮ್ಮ ಕೂಲಿಗೆ ಹೋಗುತ್ತಿದ್ದಳು. ದೇವರಾಯನ ದುರ್ಗ ಸಿದ್ಧಗಂಗಾ ಮಠದ ಮಧ್ಯದಲ್ಲಿ   ನಮ್ಮದು ಅಂತ ಎರಡು ಎಕರೆ ಜಮೀನು ಇತ್ತು.   ಸಮೃದ್ಧವಾಗಿ ಮಳೆಯಾದರೆ ರಾಗಿ, ಜೋಳ, ಕರಿಮಣಿಕಾಯಿ, ಅಲಸಂದೆ, ಹಾಗಲಕಾಯಿ, ಹುಚ್ಚೆಳ್ಳು ಬೆಳೆದರೆ ಸುಮಾರು ಎನ್ನುವಂತೆ ಆದರೆ ಹುರುಳಿ ಹಾಕಿ ಮಧ್ಯೆ ಅವರೆ ಮುಂತಾದ ದ್ವಿದಳ ಧಾನ್ಯಗಳನ್ನು ಬೇಳೆಯುತ್ತಿದ್ದೆವು. ಮುಖ್ಯವಾಗಿ ಮರಗೆಲಸವನ್ನೆ ಬದುಕಿಗೆ ನೆಚ್ಚಿಕೊಂಡಿದ್ದರಿಂದ ಹೊಲವನ್ನು ಬೀಳು ಬಿಡ...

FIRST BEST THING

  "smile is the second best thing you can do with your lips.. 😌 " ತಟಕ್ಕನೆ ಮೋಬೈಲು ಲಾಕು ‌ ಮಾಡಿ ಕೆಳಗಿಟ್ಟೆ. ಕೈ ರೇಖೆಗಳ ಮಧ್ಯದಲ್ಲಿ ಬೆವರು ನೀರು ಒಸರಿ ಹಸ್ತವೆಲ್ಲಾ ತಣ್ಣಗಾದಂತಾಗಿತ್ತು. ಕೈಗಳೇಕೋ ಸಣ್ಣಗೆ ನಡುಗುತ್ತಿದ್ದವು. ಬೇಕಂತಲೆ ಬೇರೆ ಏನಾದರೂ ಮಾಡೋಣಂತ ನನ್ನನ್ನೆ ನಾನು ತೊಡಗಿಸಿಕೊಳ್ಳೋಕೆ ನೋಡಿದೆ. ನೋಟಿಫಿಕೆಶನ್ನು ಬರುತ್ತದೆಯಾದರೂ ವಾಟ್ಸಪ್ಪು ಒಳಹೊಕ್ಕು ಇಣುಕಿದರೇನೆ ಉಚಿತ.   ಇನ್ನೂ ಡಬಲ್ಲು ಟಿಕ್ಕಲ್ಲೆ ಮೆಸೇಜು ‌ ಇತ್ತು. ಇನ್ನು ನೋಡಿಲ್ಲ ಎಂದು   ತುಸು ನಿರಾಳನಾದೆ. ಸ್ಕ್ರೋಲಿಸುತ್ತಾ ಮೇಲಿನ ಮೇಸೇಜುಗಳು, ರಿಪ್ಲೆಗಳನ್ನು ನೋಡಿದಾಗ ಅವಳು Read Receipt ಕೊಟ್ಟಿಲ್ಲವೆಂದು ಅರಿವಾಯಿತು. ಪರಿಚಯವಾಗಿ ಐದು ತಿಂಗಳಾಗಿದ್ದರೂ ಇತ್ತಿಚೆಗೆ ನಂಬರು ಕೊಟ್ಟಿದ್ದಾಗಿಯೂ ಹಾಗೆ ಅಗಣಿತ ಮೆಸೇಜುಗಳಾದರೂ ಇದ್ಯಾಕೆ ನಾನು ಗಮನಿಸಲಿಲ್ಲ ಎಂದು ಕೈ ಕೈಹಿಸುಕಿಕೊಂಡೆ. ಬಿ ಹೆಚ್ ರಸ್ತೆಯಲ್ಲೆ ಒಂದೇ ಸಂಸ್ಥೆಗೆ ಸೇರಿದ ಅಕ್ಕಪಕ್ಕವೆ ಇದ್ದ ಬಾಯ್ಸ್ ಕಾಲೇಜು ಮತ್ತು ವಿಮೆನ್ಸ್ ಕಾಲೇಜು. ನಾವಿಬ್ಬರೂ ಪರಿಚಯವಾಗೋಕೆ ಒಂದು ಸಾಂಸ್ಕ್ರೃತಿಕ ಕಾರ್ಯಕ್ರಮ. ಅದರ ವಿವರಣೆಯನ್ನ ಇನ್ನೊಮ್ಮೆ ಯಾವಗಲಾದರೂ ಬರೆಯುತ್ತೇನೆ. ಡಿಲೀಟು ‌ ಮಾಡಲು ಮನಸಾದರೂ, “ ಏನಾದರಾಗಲಿ ನೊಡೋಣ ”   ಎಂಬ ಭಂಡಧೈರ್ಯ ಬೆನ್ನು ತಟ್ಟಿತು. ಅದಾಗಲೇ ‌ ಕಳುಹಿಸಿ 13 ನಿಮಿಷಗಳಾಗಿದ್ದವು ತೊರೆಯಂತೆ ರಭಸವಾಗಿ ಹರಿಯುತ್ತಿದ್...

YELLOW ALERT

ಬೆಳಗ್ಗೆನೇ "ಜವಾಬ್ದಾರಿ ತಗೊಂಡು ಕೆಲಸ ಮಾಡೋರ್ ಕಷ್ಟ ನಿಂಗೆ ಹೇಗೆ ತಾನೆ ಗೊತ್ತಾಗ್ ಬೇಕು ಹೇಳು" ಅಂತ ಬೈದಿದ್ದು ನಾಲಿಗೆ ಮೇಲೆ ಹಾಗೆ ಇತ್ತು. ತತ್ ಕ್ಷಣಕ್ಕೆ ಏನೂ ಅನಿಸದಿದ್ದರೂ ಅಳುತ್ತಲೆ ಆಫಿಸಿನ ದಾರಿ ಹಿಡಿದಿದ್ದೆ . ಮೀಟಿಂಗ್ ಮುಗಿದರೂ ಮೀಟಿಂಗ್ ಹಾಲಿನಲ್ಲೆ ಕೂತು ಯೋಚನೆಗಳ ಸಾಗರದಲ್ಲಿ ಮುಳುಗೇಳುತ್ತಿದ್ದೆ. ಮನೆಯವರನ್ನು ಎದುರು ಹಾಕಿಕೊಂಡು ನಾನು ಮತ್ತು ಕಿರಣ್  ಇಂಟರ್ಕಾಸ್ಟ್ ಮದುವೆ ಮಾಡಿಕೊಂಡಿದ್ದೆವು. ಆಗ ಅದೇ ಸಹ್ಯವೆನಿಸಿತ್ತು. ಅವನ ಸಾಂಗತ್ಯವೊಂದೆ ಸಾಕೆನಿಸಿತ್ತು. ಹೊಂಡ ಶೋರೂಮಿನಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ಕಾಲೇಜಲ್ಲಿ ನನ್ನ ಸೀನಿಯರ್ ಕೂಡ ಹೌದು. ಸರ್ಕಾರಿ ಕೆಲಸ ಎಂದು ನಮ್ಮ ಮನೆಯಲ್ಲಿ ಒಪ್ಪುತ್ತಾರೆ ಅಂತ ಅವನು. ಮುಂದೆ ಸ್ವಂತ ಶೋ ರೂಮ್ ಇಡೋ ಸಾಮರ್ಥ್ಯ ಇದೆ ಎಂದು ನಾನು. ಎರಡು ಮನೆಯವರು ಒಪ್ಪದಿದ್ದಾಗ ಕೆಲವು ಜನರ ಮುಂದಷ್ಟೆ ಮಂತ್ರ-ಮಂಗಲ್ಯದ ಪ್ರಕಾರ ಮದುವೆಯಾದೆವು. ಆಗೆಲ್ಲಾ ಕೆಲವು ಸ್ನೇಹಿತರು ಸರಳ ವಿವಾಹವಾದ ನಮ್ಮನ್ನು ಅಭಿನಂದಿಸಿದ್ದರು. ಹೋರಾಟದ ಹಾದಿ ಅಂತೆಲ್ಲಾ ಬಣ್ಣಿಸಿದ್ದರು. ಮದುವೆಯ ಹೊಸ ಬಿಸುಪಲ್ಲಿ ಎಲ್ಲವು ಚನಾಗೇ ಇತ್ತು. ಯಾವಾಗ ಕಿರಣ ಕೆಲಸ ತೊರೆದು ಮನೆಗೆ ಬಂದನೋ ಅವಗಿಂದ ಸಮಸ್ಯೆಗಳು ಒಂದೊಂದೆ ಶುರುವಾದವು. ಅದರ ಹಿಂದೆ ಕೋವಿಡ್ ಕೂಡ ಶುರುವಾಯಿತು. ಮನೆಯ ಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಉಳಿಸಿದ ದುಡ್ಡು ಪಾರ್ಟ್ನರ್ಶಿಪ್ಪಿನಲ್ಲಿ ಗೆಳೆಯನಿಗೆ ಕೊಟ್ಟು ಗೆಳೆಯ ಕೋವಿಡ್ ಸಮ...

Departures (2008)

ದೃಶ್ಯ 1 ಕಲ್ಲಿನ ಪತ್ರ   ಅವಳ ಕೈಹಿಡಿದು ಒಂದು ಬೆಣಚುಕಲ್ಲು ಕೊಡುತ್ತಾ... “ಪ್ರಾಚೀನ ಕಾಲದಲ್ಲಿ ಅಂದ್ರೆ ಸಂವಹನ ಅಷ್ಟು ಪಕ್ವವಾಗದ ಸಮಯದಲ್ಲಿ ಜನರು ತಮ್ಮ ಭಾವನೆಗಳನ್ನು ಪ್ರೀತಿ ಪಾತ್ರರಿಗೆ ಹೇಳಲು ನದಿ ದಡದಲ್ಲಿ ದೊರೆಯುವ ಬೆಣಚುಗಲ್ಲುಗಳನ್ನು   ಬೇರೆಯವರಿಗೆ ಕೊಡುತ್ತಿದ್ದರು” ಅವನು ಕೊಬಯಾಶಿ.   ಹೆಂಡತಿ ಮಿಕಾ ಪ್ರಶ್ನಾರ್ಥಕವಾಗಿ ಅವನೆಡೆ ನೋಡುತ್ತಾಳೆ.   “ಅಂದ್ರೆ ಕಲ್ಲಿನ ಮೇಲ್ಪದರದ ಆಧಾರದ ಮೇಲೆ ಒಬ್ಬರ ಮನಸು ಅರ್ಥ ಆಗ್ತಾ ಇತ್ತು. ನುಣುಪು ಬೆಣಚುಕಲ್ಲುಗಳು ಶಾಂತ ಮನಃಸ್ಥಿತಿಯ ಪ್ರತೀಕ. ಒರಟಾಗಿದ್ದರೆ ಮತ್ತೊಬ್ಬರೆಡೆಗಿನ ಅವರ ಕಾಳಜಿಯನ್ನ ಹೇಳ್ತಾ ಇತ್ತು.”   ಕಲ್ಲು ಕೈಲಿಡಿದು ಎದೆಗವುಚಿ ಅವಳು ನಿಲ್ಲುತ್ತಾಳೆ.... ಮೌನ....   “ THANK YOU” ಮಿಕಾ ಹೇಳುತ್ತಾಳೆ. “ನಿಂಗೆ ಏನ್ ಅನಿಸ್ತಾ ಇದೆ ನಾ ಕೊಟ್ಟ ಕಲ್ಲಿನ ಬಗ್ಗೆ”   “ಅದು ಸಿಕ್ರೆಟ್” ಅವಳು ನಗುತ್ತಾಳೆ.”ತುಂಬಾ ಒಳ್ಳೆ ಕಥೆ. ಯಾರು ಪರಿಚಯ ಮಾಡಿ ಕೊಟ್ಟದ್ದು ನಿನಗೆ”   “ಅದೇ ಹಳೆ ಮುದುಕ” ಅವನು ಮೌನಕ್ಕೆ ಜಾರುತ್ತಾನೆ.          “ಅಂದ್ರೆ ಆ ನಿನ್ನ ಬಳಿ ಇರೋ ದೊಡ್ಡ ಒರಟು ಕಲ್ಲು.....?”   “ ಹೌದು. ನಮ್ಮ ಅಪ್ಪ ಕೊಟ್ಟಿದ್ದು. ಪ್ರತೀ ವರ್ಷ ಇಬ್ಬರೂ ಒಬ್ಬರಿಗೊಬ್ಬರು ಕಲ್ಲಿನ ಪತ್ರ ಕೊಡಬೇಕು ಅಂತ ಮಾತಾಡಿ ನನ್ನ ಬಿಟ...