ಕಿವುಡು ಕಾಂಚಾಣ
ಲಭ್ಯವಿದ್ದ ಮಾಹಿತಿಗಳು ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪೂರಕವಾಗಿರಲಿಲ್ಲ. ನಿರ್ಧಾರದ ನಿರೀಕ್ಷೆಯಲ್ಲಿದ್ದವರು ಪದೇ ಪದೇ ಕರೆಮಾಡುತ್ತಿದ್ದರು. ವರ್ಷಗಳ ಕೆಳಗೆ ಕೆಲಸಕ್ಕೆ ಸೇರುವಾಗ Decision Making ಬಗ್ಗೆ ಪುಂಖಾನುಪುಂಖವಾಗಿ ಇಂಟರ್ವ್ಯೂನಲ್ಲಿ ಕೊಚ್ಚಿಕೊಂಡಿದ್ದು ಪೇಲವವೆನಿಸಿತು. ಈ ಇಳಿಸಂಜೆಯಲ್ಲಿ ಬಿಸಿಲುಕೋಲು ಕೀಬೋರ್ಡು ಹಾಗು ಅದಕ್ಕಂಟಿದ ಕೈಗಳ ಮೇಲೂ ಹಾದುಹೋಗಬಾರದೇಕೆ ಎಂದುಕೊಳ್ಳುತ್ತಿದ್ದೆ. ಮೂರ್ನಾಲ್ಕು ಸಾರಿ ಗ್ರಾಮರ್ರು ನೋಡಿ ಒಂದು ಮೇಲು ಕಳುಹಿಸಿ ಹೊರಡಲು ಸಿದ್ಧನಾದೆ. ನಾ ಬರೆದದ್ದು ಓದುವರರ ತೆಕ್ಕೆಗೆ ಹಾಕುವವರೆಗೂ ನಾನು ಚಿಂತಿತ. ಆಮೇಲೆ ಸರಾಗ. ಬರೆದದ್ದನ್ನ ಜೊತೇಲಿ ಕಾಪಿಟ್ಟುಕೊಳ್ಳೋದಾದರೂ ಎಂತಕ್ಕೆ, ಹಾಗೆ ಅತೀ ಪೇರೆಂಟಿಂಗು ಮೂಡೋದು ಕೂಡ ಈ ಕಾಲದಲ್ಲಿ ಒಳ್ಳೆದಲ್ಲ ಅಲ್ವ. ಬರೆಯೋದರ ಬಗ್ಗೆ ಹೇಳ್ಬೇಕು. ಮೊದಲು ಏನಾದರೂ ಬರೆದರೆ ಹಂಚಿಕೊಳ್ಳುವಷ್ಟು ಧೈರ್ಯವಂತೂ ಇರಲಿಲ್ಲ . " ಇಷ್ಟು ಬಾಲಿಶವಾಗಿದ್ಯಲ್ಲ ಗುರು" ಅನಿಸಿ ಡಿಲೀಟು ಮಾಡಿ ಬಿಸಾಕಿದ್ದಿದೆ . ಹೇಗೋ ತೆವಳುತ್ತಾ ಸಾಗುತ್ತಾ ಇಲ್ಲಿಯವರೆಗೂ ಬಂದಿದ್ದೇನೆ . ಆಗಾಗ್ಗೆ ಏನಾದರೂ ಬರೀಬೇಕು ಅಂತ ಅಂದು ಕೊಳ್ತಾ ಇರ್ತಿನಿ. ಅವತ್ತು ಸಂಜೆ ನಾಲ್ಕು ಮುಕ್ಕಾಲು ಗಂಟೆಗೆ ಬ್ರಾಂಚಿನ ಗ್ರಿಲ್ ಗೇಟು ಬಡಿಯುತ್ತಾ ಮಗನಿಗೆ ಆಸ್ಪತ್ರೆಗೆ ದುಡ್ಡು ಬೇಕು ದಯವಿಟ್ಟು ಕೊಡಿ ಎಂದು ಯಾವಾಗಲೋ ತಣ್ಣಗಾ...