ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

FIRST BEST THING

  "smile is the second best thing you can do with your lips.. 😌 " ತಟಕ್ಕನೆ ಮೋಬೈಲು ಲಾಕು ‌ ಮಾಡಿ ಕೆಳಗಿಟ್ಟೆ. ಕೈ ರೇಖೆಗಳ ಮಧ್ಯದಲ್ಲಿ ಬೆವರು ನೀರು ಒಸರಿ ಹಸ್ತವೆಲ್ಲಾ ತಣ್ಣಗಾದಂತಾಗಿತ್ತು. ಕೈಗಳೇಕೋ ಸಣ್ಣಗೆ ನಡುಗುತ್ತಿದ್ದವು. ಬೇಕಂತಲೆ ಬೇರೆ ಏನಾದರೂ ಮಾಡೋಣಂತ ನನ್ನನ್ನೆ ನಾನು ತೊಡಗಿಸಿಕೊಳ್ಳೋಕೆ ನೋಡಿದೆ. ನೋಟಿಫಿಕೆಶನ್ನು ಬರುತ್ತದೆಯಾದರೂ ವಾಟ್ಸಪ್ಪು ಒಳಹೊಕ್ಕು ಇಣುಕಿದರೇನೆ ಉಚಿತ.   ಇನ್ನೂ ಡಬಲ್ಲು ಟಿಕ್ಕಲ್ಲೆ ಮೆಸೇಜು ‌ ಇತ್ತು. ಇನ್ನು ನೋಡಿಲ್ಲ ಎಂದು   ತುಸು ನಿರಾಳನಾದೆ. ಸ್ಕ್ರೋಲಿಸುತ್ತಾ ಮೇಲಿನ ಮೇಸೇಜುಗಳು, ರಿಪ್ಲೆಗಳನ್ನು ನೋಡಿದಾಗ ಅವಳು Read Receipt ಕೊಟ್ಟಿಲ್ಲವೆಂದು ಅರಿವಾಯಿತು. ಪರಿಚಯವಾಗಿ ಐದು ತಿಂಗಳಾಗಿದ್ದರೂ ಇತ್ತಿಚೆಗೆ ನಂಬರು ಕೊಟ್ಟಿದ್ದಾಗಿಯೂ ಹಾಗೆ ಅಗಣಿತ ಮೆಸೇಜುಗಳಾದರೂ ಇದ್ಯಾಕೆ ನಾನು ಗಮನಿಸಲಿಲ್ಲ ಎಂದು ಕೈ ಕೈಹಿಸುಕಿಕೊಂಡೆ. ಬಿ ಹೆಚ್ ರಸ್ತೆಯಲ್ಲೆ ಒಂದೇ ಸಂಸ್ಥೆಗೆ ಸೇರಿದ ಅಕ್ಕಪಕ್ಕವೆ ಇದ್ದ ಬಾಯ್ಸ್ ಕಾಲೇಜು ಮತ್ತು ವಿಮೆನ್ಸ್ ಕಾಲೇಜು. ನಾವಿಬ್ಬರೂ ಪರಿಚಯವಾಗೋಕೆ ಒಂದು ಸಾಂಸ್ಕ್ರೃತಿಕ ಕಾರ್ಯಕ್ರಮ. ಅದರ ವಿವರಣೆಯನ್ನ ಇನ್ನೊಮ್ಮೆ ಯಾವಗಲಾದರೂ ಬರೆಯುತ್ತೇನೆ. ಡಿಲೀಟು ‌ ಮಾಡಲು ಮನಸಾದರೂ, “ ಏನಾದರಾಗಲಿ ನೊಡೋಣ ”   ಎಂಬ ಭಂಡಧೈರ್ಯ ಬೆನ್ನು ತಟ್ಟಿತು. ಅದಾಗಲೇ ‌ ಕಳುಹಿಸಿ 13 ನಿಮಿಷಗಳಾಗಿದ್ದವು ತೊರೆಯಂತೆ ರಭಸವಾಗಿ ಹರಿಯುತ್ತಿದ್...