YELLOW ALERT
ಬೆಳಗ್ಗೆನೇ "ಜವಾಬ್ದಾರಿ ತಗೊಂಡು ಕೆಲಸ ಮಾಡೋರ್ ಕಷ್ಟ ನಿಂಗೆ ಹೇಗೆ ತಾನೆ ಗೊತ್ತಾಗ್ ಬೇಕು ಹೇಳು" ಅಂತ ಬೈದಿದ್ದು ನಾಲಿಗೆ ಮೇಲೆ ಹಾಗೆ ಇತ್ತು. ತತ್ ಕ್ಷಣಕ್ಕೆ ಏನೂ ಅನಿಸದಿದ್ದರೂ ಅಳುತ್ತಲೆ ಆಫಿಸಿನ ದಾರಿ ಹಿಡಿದಿದ್ದೆ . ಮೀಟಿಂಗ್ ಮುಗಿದರೂ ಮೀಟಿಂಗ್ ಹಾಲಿನಲ್ಲೆ ಕೂತು ಯೋಚನೆಗಳ ಸಾಗರದಲ್ಲಿ ಮುಳುಗೇಳುತ್ತಿದ್ದೆ. ಮನೆಯವರನ್ನು ಎದುರು ಹಾಕಿಕೊಂಡು ನಾನು ಮತ್ತು ಕಿರಣ್ ಇಂಟರ್ಕಾಸ್ಟ್ ಮದುವೆ ಮಾಡಿಕೊಂಡಿದ್ದೆವು. ಆಗ ಅದೇ ಸಹ್ಯವೆನಿಸಿತ್ತು. ಅವನ ಸಾಂಗತ್ಯವೊಂದೆ ಸಾಕೆನಿಸಿತ್ತು. ಹೊಂಡ ಶೋರೂಮಿನಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ಕಾಲೇಜಲ್ಲಿ ನನ್ನ ಸೀನಿಯರ್ ಕೂಡ ಹೌದು. ಸರ್ಕಾರಿ ಕೆಲಸ ಎಂದು ನಮ್ಮ ಮನೆಯಲ್ಲಿ ಒಪ್ಪುತ್ತಾರೆ ಅಂತ ಅವನು. ಮುಂದೆ ಸ್ವಂತ ಶೋ ರೂಮ್ ಇಡೋ ಸಾಮರ್ಥ್ಯ ಇದೆ ಎಂದು ನಾನು. ಎರಡು ಮನೆಯವರು ಒಪ್ಪದಿದ್ದಾಗ ಕೆಲವು ಜನರ ಮುಂದಷ್ಟೆ ಮಂತ್ರ-ಮಂಗಲ್ಯದ ಪ್ರಕಾರ ಮದುವೆಯಾದೆವು. ಆಗೆಲ್ಲಾ ಕೆಲವು ಸ್ನೇಹಿತರು ಸರಳ ವಿವಾಹವಾದ ನಮ್ಮನ್ನು ಅಭಿನಂದಿಸಿದ್ದರು. ಹೋರಾಟದ ಹಾದಿ ಅಂತೆಲ್ಲಾ ಬಣ್ಣಿಸಿದ್ದರು. ಮದುವೆಯ ಹೊಸ ಬಿಸುಪಲ್ಲಿ ಎಲ್ಲವು ಚನಾಗೇ ಇತ್ತು. ಯಾವಾಗ ಕಿರಣ ಕೆಲಸ ತೊರೆದು ಮನೆಗೆ ಬಂದನೋ ಅವಗಿಂದ ಸಮಸ್ಯೆಗಳು ಒಂದೊಂದೆ ಶುರುವಾದವು. ಅದರ ಹಿಂದೆ ಕೋವಿಡ್ ಕೂಡ ಶುರುವಾಯಿತು. ಮನೆಯ ಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಉಳಿಸಿದ ದುಡ್ಡು ಪಾರ್ಟ್ನರ್ಶಿಪ್ಪಿನಲ್ಲಿ ಗೆಳೆಯನಿಗೆ ಕೊಟ್ಟು ಗೆಳೆಯ ಕೋವಿಡ್ ಸಮ...