Departures (2008)
ದೃಶ್ಯ 1 ಕಲ್ಲಿನ ಪತ್ರ ಅವಳ ಕೈಹಿಡಿದು ಒಂದು ಬೆಣಚುಕಲ್ಲು ಕೊಡುತ್ತಾ... “ಪ್ರಾಚೀನ ಕಾಲದಲ್ಲಿ ಅಂದ್ರೆ ಸಂವಹನ ಅಷ್ಟು ಪಕ್ವವಾಗದ ಸಮಯದಲ್ಲಿ ಜನರು ತಮ್ಮ ಭಾವನೆಗಳನ್ನು ಪ್ರೀತಿ ಪಾತ್ರರಿಗೆ ಹೇಳಲು ನದಿ ದಡದಲ್ಲಿ ದೊರೆಯುವ ಬೆಣಚುಗಲ್ಲುಗಳನ್ನು ಬೇರೆಯವರಿಗೆ ಕೊಡುತ್ತಿದ್ದರು” ಅವನು ಕೊಬಯಾಶಿ. ಹೆಂಡತಿ ಮಿಕಾ ಪ್ರಶ್ನಾರ್ಥಕವಾಗಿ ಅವನೆಡೆ ನೋಡುತ್ತಾಳೆ. “ಅಂದ್ರೆ ಕಲ್ಲಿನ ಮೇಲ್ಪದರದ ಆಧಾರದ ಮೇಲೆ ಒಬ್ಬರ ಮನಸು ಅರ್ಥ ಆಗ್ತಾ ಇತ್ತು. ನುಣುಪು ಬೆಣಚುಕಲ್ಲುಗಳು ಶಾಂತ ಮನಃಸ್ಥಿತಿಯ ಪ್ರತೀಕ. ಒರಟಾಗಿದ್ದರೆ ಮತ್ತೊಬ್ಬರೆಡೆಗಿನ ಅವರ ಕಾಳಜಿಯನ್ನ ಹೇಳ್ತಾ ಇತ್ತು.” ಕಲ್ಲು ಕೈಲಿಡಿದು ಎದೆಗವುಚಿ ಅವಳು ನಿಲ್ಲುತ್ತಾಳೆ.... ಮೌನ.... “ THANK YOU” ಮಿಕಾ ಹೇಳುತ್ತಾಳೆ. “ನಿಂಗೆ ಏನ್ ಅನಿಸ್ತಾ ಇದೆ ನಾ ಕೊಟ್ಟ ಕಲ್ಲಿನ ಬಗ್ಗೆ” “ಅದು ಸಿಕ್ರೆಟ್” ಅವಳು ನಗುತ್ತಾಳೆ.”ತುಂಬಾ ಒಳ್ಳೆ ಕಥೆ. ಯಾರು ಪರಿಚಯ ಮಾಡಿ ಕೊಟ್ಟದ್ದು ನಿನಗೆ” “ಅದೇ ಹಳೆ ಮುದುಕ” ಅವನು ಮೌನಕ್ಕೆ ಜಾರುತ್ತಾನೆ. “ಅಂದ್ರೆ ಆ ನಿನ್ನ ಬಳಿ ಇರೋ ದೊಡ್ಡ ಒರಟು ಕಲ್ಲು.....?” “ ಹೌದು. ನಮ್ಮ ಅಪ್ಪ ಕೊಟ್ಟಿದ್ದು. ಪ್ರತೀ ವರ್ಷ ಇಬ್ಬರೂ ಒಬ್ಬರಿಗೊಬ್ಬರು ಕಲ್ಲಿನ ಪತ್ರ ಕೊಡಬೇಕು ಅಂತ ಮಾತಾಡಿ ನನ್ನ ಬಿಟ...