ಲಿಮಿಟೆಡ್ ಎಡಿಷನ್
ಏನೋ ಮರೆತವಳಂತೆ ಅನಿಸಿ ಮತ್ತದೆ ನಂಬರಿಗೆ ಕರೆ ಮಾಡಿದೆ . ‘ ಏನಮ್ಮ ವಾಗ್ಮಿತಾ ಮತ್ತೇನಾದರೂ ಹೇಳೋದು ಬಾಕಿ ಇತ್ತ ’ ಆ ಕಡೆಯಿಂದ ಧ್ವನಿ ಉಸುರಿತು . ’ ಅಲ್ಲ ಅದು . ಅಕ್ಚುಲಿ . ಇದನ್ನ ಅಮ್ಮನ ಹತ್ರ ಡಿಸ್ಕಸ್ ಮಾಡ್ಬೇಡಿ ತುಂಬಾ ಹೆದರಿಕೊಳ್ತಾಳೆ . ಗೊತ್ತಲ್ವಾ ..... ’ ಇವರನ್ನ ಏನಂತ ಕರೀಬೇಕು ಅನ್ನೋದು ಮೊದಲಿನಿಂದಲೂ ಗೊಂದಲ . ಹೇಗೊ ಮ್ಯಾನೇಜು ಮಾಡಿಕೊಂಡು ಮಾತಾಡೋಕೆ ಪ್ರಯತ್ನಿಸಿದ್ದೆ . ’ ನನಗೆ ಅರ್ಥ ಆಗತ್ತೆ . ನೀನೆ ಹೇಳೋವರೆಗೂ ನಾನು ಮಾತಾಡೊಲ್ಲ . ಆದರೆ ನಿನಗೆ ತೊಂದರೆ ಎನಿಸೊ ಸಣ್ಣ ವಿಷಯ ಆದರೂ ನನ್ನ ಬಳಿ ಹೇಳಿಕೊಳ್ಳೋದು ಮರಿಬೇಡ ’ ಅವರು ಹೇಳಿ ನನ್ನ ಪ್ರತಿಕ್ರಿಯೆಗೆ ಕಾಯುತ್ತಿದ್ದರು . ಸರಿಯೆಂದು ಫೋನಿಟ್ಟೆ . ಇವರು ಪ್ರಸಾದ್ . ಅಮೃತೂರಿನಲ್ಲಿ ಇನ್ಸ್ಪೆಕ್ಟರ್ ಆಗಿದ್ದಾರೆ . ಇವರನ್ನ ನಿಮಗೆಲ್ಲಾ ಏನಂತ ಪರಿಚಯ ಮಾಡಿಕೊಡಬೇಕು ಗೊತ್ತಾಗ್ತಿಲ್ಲ . ನನ್ನ Ex- ಭಾವಿ ಅಪ್ಪ ಅಂತನೊ ಆತಂಕದ ಕಟ್ಟೆಯೊಡೆಯುವಾಗ ದೊರಕಿದ ಸಣ್ಣ ಗರಿಕೆಯೋ ಗೊತ್ತಿಲ್ಲ. *** ಮೂರ್ನಾಲ್ಕು ವರ್ಷಗಳ ಕೆಳಗೆ ಒಂದು ಘಟನೆಯಾಯ್ತು . ಅಂದು ನಾನೆಷ್ಟು ತಪ್ಪು ಮಾಡಿದೆ ಅಂತ ಅವತ್ತಿನ ಬಿಸಿಯಲ್ಲಿ ನ ನ್ನ ಅರಿವಿಗೆ ಬಂದಿರಲಿಲ್ಲ. ಅಪ್ಪ ಹೋಗಿ ಎರಡು ವರ್ಷವಾಗಿತ್ತು . ಒಂದು ದಿನ ಅಮ್ಮ ನನ್ನ ಕೈ ಯಿಡಿದು ಪ್ರಸಾದ್ ಅವರನ್ನ ತಾನು ...