ಚಿಲ್ಲರೆ ಕಥೆಗಳು
"ಏನು ಶಬ್ದಾನೇ ಬರ್ತಿಲ್ಲ ಅಂದ್ರೆ, ನಿಮಗೆ ಕಿವಿ ಹೋದ್ವ ಇಲ್ಲ ಗಂಟೆಗೆ ನಾಲಗೆ ಬಿದ್ದೋಯ್ತಾ". ತುಸು ಕೋಪದಲ್ಲೇ ಕಾರ್ಯದರ್ಶಿಗಳು ಹೇಳಿದರು. ನೆನ್ನೆಯಿಂದ ದೇವಸ್ಥಾನದ ಗಂಟೆಯಲ್ಲಿ ಶಬ್ಧವೇ ಹೊಮ್ಮುತ್ತಿಲ್ಲ ಅನ್ನೋದು ಹೇಳೋಕೆ ಅರ್ಚಕರು ದರ ದರನೇ ಓಡಿಬಂದು ಮನೆಯ ಬಾಗಿಲ ಬಳಿ ಬಿಸುಟ ಅರ್ಚಕರ ಉಂಗುಷ್ಟ ಕಿತ್ತುಹೋದ ಹವಾಯಿ ಚಪ್ಪಲಿಗೆ ಜೀವದಾನವೆಂಬಂತೆ ಹಾಕಿದ್ದ ಪಿನ್ನು ತನ್ನೆಲ್ಲಾ ಶಕ್ತಿ ತೊರೆದು ಉಂಗುಷ್ಟದೊಂದಿಗೆ ಹೊರಬಂದಿತು. ಸರಿ ನೋಡೋಣ ಅಂತ ಇಬ್ಬರು ದೇವಸ್ಥಾನದ ಹಾದಿ ಹೂಡಿದರು. ಇದಿರು ಸಿಕ್ಕಮನುಷ್ಯನ ಆಕೃತಿಗೆ ಎಂತದೋ ಕುತೂಹಲ ಎನಿಸಿ " ದೇವಸ್ಥಾನದ ಲೆಕ್ಕದಲ್ಲಿ ಮಿಸ್ಟಿಕ್ ಆಯಿತ. ಏಕಿಷ್ಟು ಅವಸರ" ಎಂದು ನಕ್ಕಿತು.ಅರ್ಚಕರಿಗೆ ಏನು ಹೇಳಬೇಕು ತೋರಲಿಲ್ಲ. ಅಲ್ಲೆ ನಿಂತು "ಇಲ್ನೋಡಿ ದೇವಸ್ಥಾನದ..." "ಆರ್ಚಕರೇ ದೇವರೇ ಇಲ್ಲ ಅನ್ನೋ ನಾಸ್ತಿಕ ಅವನು, ಅವನಿಗ್ಯಾಕೆ ಇವೆಲ್ಲಾ ಹೇಳ್ತಿರಾ. ನಡಿರಿ ಸುಮ್ನೆ" ಕಾರ್ಯದರ್ಶಿಗಳು ಮತ್ತಷ್ಟು ಕೆಂಡವಾದರು. ಆ ಮನುಷ್ಯ ಆಕೃತಿ ಅಲ್ಲೆ ನಿಂತು ಏನನ್ನೋ ಯೋಚಿಸುತ್ತಿತ್ತು ಅದಕ್ಕೆ ನೆರಳಿರಲಿಲ್ಲ. ದೇವಾಲಯಕ್ಕೆ ಬಂದ ಕಾರ್ಯದರ್ಶಿಗಳು ಎಡೆಬಿಡದೇ ಗಂಟೆಯೊಡೆದು ಆರ್ಚಕರ ಮುಖ ನೋಡಿದರು. ಮೂಲೆಯಲ್ಲಿ ಮಲಗಿದ್ದ ಬೀದಿನಾಯಿಯೊಂದು ಅನಿರೀಕ್ಷಿತವಾಗಿ ಎರಗಿದ ಸದ್ದಿಗೆ ಎಚ್ಚರಗೊಂಡು ನೋಡತೊಡಗಿತು. ಕಾರ್ಯದರ್ಶಿಗಳು ಗುಡುಗಿ ಹೋದನಂತರ ಆರ್ಚಕರು ಪ್ರಯತ್ನಿಸಿದ...