ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪ ನೀನ್ಯಾಕೆ ಹೀಗೆ....?

  ಅಪ್ಪ ನೀನ್ಯಾಕೆ ಹೀಗೆ....?   ಮೊನ್ನೆಯಷ್ಟೆ ತಮಿಳಿನ "ವಾಳೈ" ಸಿನಿಮಾ ನೋಡುತ್ತಿದ್ದೆ. ಶ್ರೀವೈಕುಂಡಮ್ ‍ ನಲ್ಲಿ ೧೯೯೯ರಲ್ಲಿ ನಡೆದ ಲಾರಿ ದುರಂತದಲ್ಲಿ ಮೃತರಾದ ೨೦ ಬಾಳೆಗೋನೆ ಸಾಗಣೆ ಮಾಡುತ್ತಿದ್ದ ಶ್ರಮಿಕರ ಕತೆ. ಬಾಲ್ಯವೇ ಮುಖ್ಯಭೂಮಿಕೆಯಲ್ಲಿರುವ ಸಿನಿಮಾವಾದ ಕಾರಣ ಅರ್ದ್ರತೆಯಿಂದ ಇಷ್ಟವಾಗುತ್ತದೆ. ಇದರಲ್ಲಿ ಒಂದು ದೃಶ್ಯ ನನ್ನನ್ನು ತುಂಬಾ ಕಾಡಿತು.   ಶಾಲೆಯ ಬಿಡುವಿನ ದಿನಗಳಲ್ಲಿ ಮಾಡುತ್ತಿದ್ದ ಬಾಳೆಗೊನೆಗಳ ಸಾಗಿಸುವ ಕೆಲಸಕ್ಕೆ ಬೇಸತ್ತು ಚಿತ್ರದ ಮುಖ್ಯಪಾತ್ರವೊಂದು ನೀರೊಳಗೆ ಅವುಗಳನ್ನು ಎಸೆದು ನೀರಿಗೆ ಜಿಗಿಯುವ   ಸನ್ನಿವೇಶ ಒಂದಿದೆ ‌ . ಅದು ನನಗೆ ಹನ್ನೊಂದನೆ ವರ್ಷದವನಿದ್ದಾಗ ಸಂಕ್ರಾಂತಿ ಹಬ್ಬದ ದಿನ ನೆನಪಿಗೆ ತಂದು ಬಾಯೆಲ್ಲಾ ಉಪ್ಪು ಒಗರು ಪಸೆ ನಾಲಿಗೆ ಮೇಲೆ ತಂದಿತು. ಅದಕ್ಕೆ ಬಹುಮುಖ್ಯ ಕಾರಣವೂ ಇದೆ.   ನನ್ನ ಅಪ್ಪ ಮರಗೆಲಸ ಮಾಡುತ್ತಿದ್ದ. ಅಮ್ಮ ಕೂಲಿಗೆ ಹೋಗುತ್ತಿದ್ದಳು. ದೇವರಾಯನ ದುರ್ಗ ಸಿದ್ಧಗಂಗಾ ಮಠದ ಮಧ್ಯದಲ್ಲಿ   ನಮ್ಮದು ಅಂತ ಎರಡು ಎಕರೆ ಜಮೀನು ಇತ್ತು.   ಸಮೃದ್ಧವಾಗಿ ಮಳೆಯಾದರೆ ರಾಗಿ, ಜೋಳ, ಕರಿಮಣಿಕಾಯಿ, ಅಲಸಂದೆ, ಹಾಗಲಕಾಯಿ, ಹುಚ್ಚೆಳ್ಳು ಬೆಳೆದರೆ ಸುಮಾರು ಎನ್ನುವಂತೆ ಆದರೆ ಹುರುಳಿ ಹಾಕಿ ಮಧ್ಯೆ ಅವರೆ ಮುಂತಾದ ದ್ವಿದಳ ಧಾನ್ಯಗಳನ್ನು ಬೇಳೆಯುತ್ತಿದ್ದೆವು. ಮುಖ್ಯವಾಗಿ ಮರಗೆಲಸವನ್ನೆ ಬದುಕಿಗೆ ನೆಚ್ಚಿಕೊಂಡಿದ್ದರಿಂದ ಹೊಲವನ್ನು ಬೀಳು ಬಿಡ...